ಗೊಂಡಾ (ಉತ್ತರ ಪ್ರದೇಶ):ಕೊಳದಲ್ಲಿ ಸ್ನಾನ ಮಾಡಲು ಹೋದ ಒಂದೇ ಕುಟುಂಬಕ್ಕೆ ಸೇರಿದ ಐವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.
ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಬಾಲಕ ಮೃತಪಟ್ಟಿದ್ದು, ಇವರೆಲ್ಲರೂ ಗೊಂಡಾದ ರಸೂಲ್‌ಪುರ್‌ಖಾನ್ ಗ್ರಾಮದಲ್ಲಿ ವಾಸವಾಗಿರುವ ಅರವಿಂದ್, ಸುರೇಂದ್ರ ಮತ್ತು ವೀರೇಂದ್ರ ಎಂಬ ಸಹೋದರರ ಮಕ್ಕಳಾಗಿದ್ದಾರೆ. ಮೃತ ಮಕ್ಕಳನ್ನು ಚಂಚಲ (8), ಶಿವಕಾಂತ್ (6), ರಾಗಿಣಿ (8), ಪ್ರಕಾಶಿನಿ (10), ಮುಸ್ಕಾನ್ (12) ಎಂದು ಗುರುತಿಸಲಾಗಿದೆ.