ಕರ್ನಾಟಕ

karnataka

ETV Bharat / crime

2 ವರ್ಷಗಳ ಹಿಂದೆ ನಿರ್ಮಾಪಕಿ ಮೇಲೆ ಹಲ್ಲೆ ಆರೋಪ: ನಟಿ ಸಂಜನಾ ವಿರುದ್ಧ ಎಫ್ಐಆರ್

ಎರಡು ವರ್ಷಗಳ ಹಿಂದೆ ಲ್ಯಾವೆಲ್ಲೆ ರಸ್ತೆಯ ಕೋಝಿ ಬಾರ್​​ಗೆ ನಿರ್ಮಾಪಕಿ ವಂದನಾ ಜೈನ್ ಹಾಗೂ ಸಂಜನಾ ಗಲ್ರಾನಿ ಭೇಟಿ ನೀಡಿದ್ದರು. ನಿರ್ಮಾಪಕಿ ವಂದನಾ ಬಾರ್​ನಲ್ಲಿ ಪಾರ್ಟಿಯಲ್ಲಿ ಕೂಡ ಭಾಗಿಯಾಗಿದ್ದರು. ಈ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆಯಾಗಿತ್ತು. ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ಸಂಜನಾ ವಿಸ್ಕಿ ಎರಚಿ ವಂದನಾ ಮೇಲೆ ಬಲಪ್ರಯೋಗ ಮಾಡಿದ್ದರು ಎಂದು ಆರೋಪಿಸಲಾಗಿತ್ತು.‌

fir-lodged-against-actress-sanjana-galrani-news
ನಟಿ ಗಲ್ರಾನಿ ವಿರುದ್ಧ ಎಫ್ಐಆರ್ ದಾಖಲು

By

Published : May 13, 2021, 7:25 PM IST

ಬೆಂಗಳೂರು: ಎರಡು ವರ್ಷಗಳ ಹಿಂದೆ ನಡೆದಿದ್ದ ಗಲಾಟೆ ಸಂಬಂಧ ನ್ಯಾಯಾಲಯದ ಸೂಚನೆ ಮೇರೆಗೆ ನಟಿ ಸಂಜನಾ ಗಲ್ರಾನಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಸ್ಯಾಂಡಲ್​ವುಡ್ ಡ್ರಗ್ಸ್‌ ಪ್ರಕರಣ : ಬೇಲ್​​ ಸಿಕ್ಕಿದ ಬಳಿಕ ಸಂಜನಾ ಎಲ್ಲಿದ್ದಾರೆ!?

2019ರ ಡಿಸೆಂಬರ್ 24 ರಂದು ಕ್ಲಬ್​​ವೊಂದರಲ್ಲಿ ನಿರ್ಮಾಪಕಿ ವಂದನಾ ಜೈನ್ ಹಾಗೂ ಸಂಜನಾ ಗಲ್ರಾನಿ ನಡುವೆ ಗಲಾಟೆಯಾಗಿತ್ತು.‌ ಇದನ್ನು ಉಲ್ಲೇಖಿಸಿ ವಂದನಾ ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ಸಲ್ಲಿಸಿದ್ದರು. ವಾದ-ಪ್ರತಿವಾದ ಬಳಿಕ ಅಂತಿಮವಾಗಿ ಸಂಜನಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆ, ಮೇ 12 ರಂದು ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಪ್ರಕರಣದ ಹಿನ್ನೆಲೆ:

ಎರಡು ವರ್ಷಗಳ ಹಿಂದೆ ಲ್ಯಾವೆಲ್ಲೆ ರಸ್ತೆಯ ಕೋಝಿ ಬಾರ್​​ಗೆ ನಿರ್ಮಾಪಕಿ ವಂದನಾ ಜೈನ್ ಹಾಗೂ ಸಂಜನಾ ಗಲ್ರಾನಿ ಭೇಟಿ ನೀಡಿದ್ದರು. ನಿರ್ಮಾಪಕಿ ವಂದನಾ ಬಾರ್​ನಲ್ಲಿ ಪಾರ್ಟಿಯಲ್ಲಿ ಕೂಡ ಭಾಗಿಯಾಗಿದ್ದರು. ಈ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆಯಾಗಿತ್ತು. ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ಸಂಜನಾ ವಿಸ್ಕಿ ಎರಚಿ ವಂದನಾ ಮೇಲೆ ಬಲಪ್ರಯೋಗ ಮಾಡಿದ್ದರು ಎಂದು ಆರೋಪಿಸಲಾಗಿತ್ತು.‌

ಘಟನೆ ಸಂಬಂಧ ವಂದನಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ವಾದ-ಪ್ರತಿವಾದ ಬಳಿಕ‌‌ ಕೋರ್ಟ್ ಸೂಚನೆ ಹಿನ್ನೆಲೆ ನಟಿ ವಿರುದ್ದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ‌.

ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಈಗ್ಗೆ ಕೆಲ ದಿನಗಳ ಮುಂಚೆ ಸಂಜನಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ‌ ಜೈಲಿಗಟ್ಟಿದ್ದರು. ಸದ್ಯ ನ್ಯಾಯಾಲಯದಲ್ಲಿ ಜಾಮೀನು ಪಡೆದ ಸಂಜನಾ ಹೊರಗೆ ಬಂದಿದ್ದಾರೆ.

ABOUT THE AUTHOR

...view details