ಮಂಗಳೂರು: ಮಹಿಳೆಯೊರ್ವರು ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ನಲ್ಲಿ ಕದ್ದುಮುಚ್ಚಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಬಗ್ಗೆ ಮಂಗಳೂರಿನ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಸಂಜೆ 7.30ರ ವೇಳೆಗೆ ಮಹಿಳೆ ತನ್ನ ಮನೆಯ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಿಟಕಿಯ ಹೊರಭಾಗದಿಂದ ಮೊಬೈಲ್ನಲ್ಲಿ ಬಾತ್ ರೂಂನೊಳಗಿನ ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ಮಹಿಳೆ ಕೂಡಲೇ ಅಲ್ಲಿಂದ ಹೊರ ಬಂದು ತಾಯಿಗೆ ವಿಷಯ ತಿಳಿಸಿದ್ದಾರೆ. ಮಹಿಳೆ ಮತ್ತು ತಾಯಿ ಇಬ್ಬರು ಮನೆಯ ಹಿಂದೆ ಬಂದು ನೋಡಿದಾಗ ಮನೆಯ ಪಕ್ಕದಲ್ಲಿದ್ದ ಬೆಂಚನ್ನು ಬಾತ್ ರೂಂ ಕಿಟಕಿ ಸಮೀಪ ಇರಿಸಿ ಅದರ ಮೇಲೆ ಓರ್ವ ನಿಂತಿದ್ದು ಕಂಡು ಬಂದಿದೆ. ಇವರಿಬ್ಬರೂ ಅಲ್ಲಿಗೆ ಬರುವುದನ್ನು ನೋಡಿ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.