ಕರ್ನಾಟಕ

karnataka

ETV Bharat / crime

ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಪೊಲೀಸ್​ ಮೇಲೆ ಅತ್ಯಾಚಾರ: ವಿಡಿಯೋ ಮಾಡಿ ಬ್ಲಾಕ್​ಮೇಲ್​! - Mumbai's Meghwadi Police Station

ಮದುವೆ ನೆಪದಲ್ಲಿ ಮಹಿಳಾ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಅತ್ಯಾಚಾರ ಎಸಗಿದ ಆರೋಪಿ, ಕೃತ್ಯದ ದೃಶ್ಯ ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ.

FIR against 3 men for raping female cop in Mumbai
ಮಹಿಳಾ ಪೊಲೀಸ್​ ಮೇಲೆ ಅತ್ಯಾಚಾರ

By

Published : Jun 15, 2021, 6:57 AM IST

ಮುಂಬೈ (ಮಹಾರಾಷ್ಟ್ರ): ಮಹಿಳಾ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಮೂವರ ವಿರುದ್ಧ ಮುಂಬೈನ ಮೇಘವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪ್ರಮುಖ ಆರೋಪಿಯು ಮದುವೆ ನೆಪದಲ್ಲಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೃಶ್ಯ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್

ಪ್ರಮುಖ ಆರೋಪಿಯು ಔರಂಗಾಬಾದ್​ ಮೂಲದವನಾಗಿದ್ದು, ಸೋಷಿಯಲ್​ ಮೀಡಿಯಾ ಮೂಲಕ ಇಬ್ಬರಿಗೂ​ ಪರಿಚಯವಾಗಿರುತ್ತದೆ. ಮುಂಬೈನ ಪೊವಾಯ್ ಪ್ರದೇಶಕ್ಕೆ ಆಕೆಯನ್ನು ಭೇಟಿ ಮಾಡಲು ಬಂದ ಆರೋಪಿ, ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ದೃಶ್ಯವನ್ನು ಚಿತ್ರೀಕರಿಸಿ, ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಲೈಂಗಿಕ ಕಿರುಕುಳ ನೀಡಲು, ಬ್ಲಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾನೆ.

ಇದನ್ನೂ ಓದಿ: ಜಾಮೀನಿನ ಮೇಲೆ ಹೊರಬಂದು ಅತ್ಯಾಚಾರ ಸಂತ್ರಸ್ತೆಯನ್ನ ಕೊಂದ ಆರೋಪಿ

ಜೂನ್ 11ರಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮೇಘವಾಡಿ ಠಾಣಾ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details