ವಂಕಿಡಿ(ಹೈದರಾಬಾದ್): ಕೊಮರಂ ಭೀಮ್ ಜಿಲ್ಲೆಯ ವಂಕಿಡಿ ಮಂಡಲದ ಚೌಪನಗುಡ ಗ್ರಾಪಂ ವ್ಯಾಪ್ತಿಯ ಖಾನಾಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಲಿಯಾಗಿದ್ದಾನೆ. ದಾಳಿಯಲ್ಲಿ ರೈತ ಸಿಡಂ ಭೀಮು ಎಂಬುವರು ಮೃತಪಟ್ಟಿದ್ದಾರೆ.
ಘಟನೆ ವಿವರ: ರೈತ ತನ್ನ ಹೊಲದಲ್ಲಿ ಬೆಳೆದಿದ್ದ ಹತ್ತಿ ಬೆಳೆ ಕಾಯಲು ಹೊಲಕ್ಕೆ ಹೋಗಿದ್ದನು. ಈ ವೇಳೆ ಆತನ ಮೇಲೆ ಹುಲಿ ಎರಗಿ ಹತ್ಯೆ ಮಾಡಿದೆ. ರೈತನು ಹತ್ತಿ ಬೆಳೆ ಜಮೀನಿನಿಂದ ಹುಲಿ ಸ್ವಲ್ಪ ದೂರ ಎಳೆದೊಯ್ದಿದೆ. ದಾಳಿ ಅರಿತ ಅಕ್ಕಪಕ್ಕದ ದನಗಾಹಿಗಳು ಜೋರಾಗಿ ಕಿರುಚಾಡಿದ್ದಾರೆ. ಈ ಧ್ವನಿಗೆ ಹೆದರಿದ ಹುಲಿಯು ಸ್ಥಳದಿಂದ ರೈತನನ್ನು ಬಿಟ್ಟು ಹೋಗಿದೆ.