ಕರ್ನಾಟಕ

karnataka

ETV Bharat / crime

ಪುನೀತ್‌ ಸಾವಿನ ಸುದ್ದಿ ನೋಡುತ್ತಲೇ ಹೃದಯಾಘಾತ; ಅಪ್ಪು ಮತ್ತೊಬ್ಬ ಅಭಿಮಾನಿ ಸಾವು

ಪುನೀತ್‌ ರಾಜ್‌ಕುಮಾರ್‌ ಸಾವಿನ ಸುದ್ದಿ ನೋಡುತ್ತಿದ್ದಾಗ ಹೃದಯಾಘಾತವಾದ ಪರಿಣಾಮ ಮತ್ತೊಬ್ಬ ಅಭಿಮಾನಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

fan died while watching actor puneeth rajkumar death news in mandya
ಪುನೀತ್‌ ಸಾವಿನ ಸುದ್ದಿ ನೋಡುತ್ತಲೇ ಹೃದಯಾಘಾತ; ಅಪ್ಪು ಮತ್ತೊಬ್ಬ ಅಭಿಮಾನಿ ಸಾವು

By

Published : Oct 30, 2021, 5:49 PM IST

ಮಂಡ್ಯ:ನಟ ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿ ತಿಳಿದು ಹೃದಯಾಘಾತಕ್ಕೊಳಗಾದ ಅಭಿಮಾನಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದಲ್ಲಿ ನಡೆದಿದೆ.

ವೈ.ಎಸ್. ಸುರೇಶ್ (45) ಮೃತ ಅಭಿಮಾನಿ. ಇಂದು ಬೆಳಗ್ಗೆಯಿಂದಲೂ ಅಂತಿಮ ದರ್ಶನದ ಸುದ್ದಿ ನೋಡುತ್ತಿದ್ದ ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಧ್ಯಾಹ್ನ ಏಕಾಏಕಿ ಸುರೇಶ್ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ.

ಈತ ಪುನೀತ್ ಅಭಿಮಾನಿ ಮಾತ್ರವಲ್ಲದೇ ರಾಜ್ ಕುಟುಂಬದ ಅಭಿಮಾನಿಯಾಗಿದ್ದರು‌. ಇವರು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಮೃತ ಸುರೇಶ್‌, ಒಂದೆರಡು ಸಿನಿಮಾಗೆ ಚಿತ್ರ ಕಥೆಯನ್ನೂ ಬರೆದಿದ್ದರು ಎನ್ನಲಾಗ್ತಿದೆ.

ನಿನ್ನೆ ಇಹಲೋಕ ತ್ಯಜಿಸಿದ ಪುನೀತ್‌ ರಾಜ್‌ಕುಮಾರ್‌ ಅವರ ಸುದ್ದಿ ತಿಳಿದು ಆತ್ಮಹತ್ಯೆ ಹಾಗೂ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

For All Latest Updates

ABOUT THE AUTHOR

...view details