ಕರ್ನಾಟಕ

karnataka

ETV Bharat / crime

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ; ಮತ್ತೆ ಮೂವರ ಬಂಧನ

ಸಿಲಿಕಾನ್‌ ಸಿಟಿಯನ್ನು ಬೆಚ್ಚಿಬೀಳಿಸಿದ್ದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಪೊಲೀಸರು, ನಿನ್ನೆ ಮಧ್ಯಾಹ್ನ ಇಬ್ಬರು ಹಾಗೂ ತಡರಾತ್ರಿ ಮೂವರು ಸೇರಿ ಒಟ್ಟು ಐವರು ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ. ಈ ಬಗ್ಗೆ ಡಿಸಿಪಿ ಸಂಜೀವ್​ ಪಾಟೀಲ್​ ಮಾಹಿತಿ ನೀಡಿದ್ದಾರೆ.

ex-corporator Rekha Kadiresh murder case; 3 more accused arrested in bangalore
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ; ಮತ್ತೆ ಮೂವರ ಬಂಧನ

By

Published : Jun 26, 2021, 3:49 AM IST

Updated : Jun 26, 2021, 9:17 AM IST

ಬೆಂಗಳೂರು:ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ತಡರಾತ್ರಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸ್ಟೀಫನ್​, ಅಜಯ್, ಪುರುಷೋತ್ತಮ್ ಬಂಧಿತ ಆರೋಪಿಗಳು. ಪುರುಷೋತ್ತಮ್ ಕೊಲೆಗೂ ಮುನ್ನ ಸಿಸಿಟಿವಿ ತಿರುಗಿಸಿದ್ದ ಆಸಾಮಿಯಾಗಿದ್ದಾನೆ.

ಮೃತ ರೇಖಾ ಸಂಬಂಧಿ‌ ಸಂಜಯ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರು ಕಾರ್ಯ ಪ್ರವೃತ್ತರಾಗಿ ನಿನ್ನೆ ಮಧ್ಯಾಹ್ನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಪೀಟರ್ ಮತ್ತು ಸೂರ್ಯ ಎಂಬುವರ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿತ್ತು. ಇದೀಗ ಘಟನೆ ಸಂಬಂಧ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದಂತಾಗಿದೆ. ಪೀಟರ್, ಸೂರ್ಯನನ್ನು ಬಂಧಿಸುವ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದರು. ದಾಳಿ ವೇಳೆ ಪಿಎಸ್​ಐ ಹಾಗೂ ಓರ್ವ ಕಾನ್ಸ್​ಟೇಬಲ್​ ಗಾಯಗೊಂಡಿದ್ದರು. ಸ್ಟೀಫನ್ ಇಡೀ ಪ್ರಕರಣ ಪ್ಲಾನ್​ ಮಾಡಿದ್ದು, ಎಲ್ಲ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಎಂದು ಡಿಸಿಪಿ ಸಂಜೀವ್​ ಪಾಟೀಲ್​ ತಿಳಿಸಿದ್ದಾರೆ.

ಇದನ್ನೂ ಓದಿ: Murder Video: ರೇಖಾ ಕದಿರೇಶ್ ಹತ್ಯೆಯ ಭೀಕರ ವಿಡಿಯೋ ವೈರಲ್​

ತಮ್ಮ ಮೇಲೆ ದಾಳಿ ನಡೆದ ಕಾರಣ ಆತ್ಮರಕ್ಷಣೆಗಾಗಿ ಉಪ್ಪಾರಪೇಟೆ ಇನ್ಸ್​ಪೆಕ್ಟರ್​ ಶಿವಸ್ವಾಮಿ ಮತ್ತು ಕಾಟನ್‌ಪೇಟೆ ಇನ್ಸ್​ಪೆಕ್ಟರ್ ಚಿದಾನಂದ್ ಶುಕ್ರವಾರ ಬೆಳಗ್ಗೆ ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ್ದರು. ಆ ಸಂದರ್ಭದಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮತ್ತೆ ಮೂವರ ಬಂಧನವಾಗಿದ್ದು, ಇಂದು ಒಟ್ಟು ಐವರು ಆರೋಪಿಗಳ ವೈದ್ಯಕೀಯ ಪರೀಕ್ಷೆ ನಂತರ ಕೋರ್ಟ್‌ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.

ರೇಖಾ ಸಹೋದರಿ ಮಗ ವಶಕ್ಕೆ:

ರೇಖಾ ಕದಿರೇಶ್ ಸಹೋದರಿ ಮಾಲಾ ಎಂಬುವರ ಮಗ ಅರುಳ್ ಎಂಬಾತನನ್ನೂ ಕೂಡ ವಶಕ್ಕೆ ಪಡೆಯಲಾಗಿದೆ. ಆದರೆ ಈತನ ಬಗ್ಗೆ ಅಧಿಕೃತ ಬಂಧನ ವಾರಂಟ್ ಹೊರಡಿಸಲಾಗಿಲ್ಲ. ಅಲ್ಲದೆ, 22ರಿಂದ 25 ಜನರನ್ನು ವಶಕ್ಕೆ ಪಡೆದು ವಿಚರಣೆಗೊಳಪಡಿಸಲಾಗಿದೆ ಎಂದು ಸಂಜೀವ್ ಪಾಟೀಲ್ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

Last Updated : Jun 26, 2021, 9:17 AM IST

ABOUT THE AUTHOR

...view details