ಕರ್ನಾಟಕ

karnataka

ETV Bharat / crime

ಹೂ ಕೊಯ್ಯಲು ಹೋಗಿದ್ದವರಿಗೆ ವಿದ್ಯುತ್ ಶಾಕ್; ಬಾವಿಗೆಸೆಯಲ್ಪಟ್ಟು ಮೂವರ ಸಾವು

ಹಿಂದೂರಾವ್ ಮಾರುತಿ ಶಿಂಧೆ, ಸೀಮಾ ಸದಾಶಿವ ಶಿಂಧೆ ಮತ್ತು ಶುಭಂ ಸದಾಶಿವ ಶಿಂದೆ ಅವರು ಸಂಜೆ ಬಾವಿಯ ಬಳಿಯ ಹೊಲದಲ್ಲಿ ಹೂ ಕೊಯ್ಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅಚಾನಕ್ಕಾಗಿ ವಿದ್ಯುತ್ ತಗುಲಿ ಮೂವರು ಮೃತಪಟ್ಟಿದ್ದಾರೆ ಬಾವಿಗೆಸೆಯಲ್ಪಟ್ಟಿದ್ದಾರೆ.

ಹೂ ಕೊಯ್ಯಲು ಹೋಗಿದ್ದವರಿಗೆ ವಿದ್ಯುತ್ ಶಾಕ್; ಬಾವಿಗೆಸೆಯಲ್ಪಟ್ಟು ಮೂವರ ಸಾವು
Electric shock for those who went to pick flowers

By

Published : Sep 3, 2022, 3:17 PM IST

ತಾಸವಡೆ, ತಾ. ಕರಾಡ್ (ಮಹಾರಾಷ್ಟ್ರ): ಹೂ ಕೀಳಲು ತೋಟಕ್ಕೆ ಹೋಗಿದ್ದ ಮೂವರಿಗೆ ವಿದ್ಯುತ್ ಶಾಕ್ ತಗುಲಿದ ನಂತರ ಅವರು ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ಇಲ್ಲಿ ನಡೆದಿದೆ. ತಾಸವಡೆ ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಓರ್ವ ಬಾಲಕ, ಆತನ ಸೋದರಮಾವ ಸೇರಿದಂತೆ ಮೂವರು ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಮೃತರನ್ನು ಹಿಂದೂರಾವ್ ಮಾರುತಿ ಶಿಂದೆ (ವಯಸ್ಸು 58), ಸೀಮಾ ಸದಾಶಿವ ಶಿಂದೆ (ವಯಸ್ಸು 48) ಮತ್ತು ಶುಭಂ ಸದಾಶಿವ ಶಿಂದೆ (23 ವರ್ಷ) ಎಂದು ಗುರುತಿಸಲಾಗಿದೆ.

ತಾಸವಾಡೆ (ಕರಾಡ)ಯ ಶಿಂದೆ ಬಡಾವಣೆಯಲ್ಲಿ ವಾಸವಾಗಿರುವ ಹಿಂದೂರಾವ್ ಮಾರುತಿ ಶಿಂದೆ, ಸೀಮಾ ಸದಾಶಿವ ಶಿಂದೆ ಮತ್ತು ಶುಭಂ ಸದಾಶಿವ ಶಿಂದೆ ಅವರು ಸಂಜೆ ಬಾವಿಯ ಬಳಿಯ ಹೊಲದಲ್ಲಿ ಹೂ ಕೊಯ್ಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅಚಾನಕ್ಕಾಗಿ ವಿದ್ಯುತ್ ತಗುಲಿದ್ದು, ಈ ಆಘಾತದಿಂದ ಮೂವರೂ ಬಾವಿಗೆಸೆಯಲ್ಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಧಾವಿಸಿ ಬಂದಿರು. ಆದರೆ ಅಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ನೀಲೇಶ್ ಶಂಕರ್ ಶಿಂದೆ (ವಯಸ್ಸು 25) ಮತ್ತು ವಿನೋದ್ ಪಾಂಡುರಂಗ ಶಿಂದೆ (ವಯಸ್ಸು 40) ಅದೃಷ್ಟವಶಾತ್ ಬದುಕುಳಿದಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಈ ಘಟನೆಯಿಂದ ತಾಸವಾಡೆ ಗ್ರಾಮ ಶೋಕತಪ್ತವಾಗಿದೆ.

ಈ ಆಘಾತಕಾರಿ ಘಟನೆ ನಡೆದ ಸುಮಾರು ಒಂದು ಗಂಟೆಯ ನಂತರ ಮೂವರ ಶವಗಳನ್ನು ಬಾವಿಯಿಂದ ಹೊರತೆಗೆಯಲಾಯಿತು. ತಡರಾತ್ರಿ ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕರಾಡಕ್ಕೆ ರವಾನಿಸಲಾಗಿದೆ.

ಇದನ್ನು ಓದಿ:ವಿಡಿಯೋ: ರಸ್ತೆಗೋಸ್ಕರ ಬೃಹತ್​​ ಮರ ಕಡಿದ NHAI.. ಪ್ರಾಣ ಕಳೆದುಕೊಂಡ ನೂರಾರು ಪಕ್ಷಿಗಳು

ABOUT THE AUTHOR

...view details