ಮೈಸೂರು :ಕೌಟುಂಬಿಕ ಕಲಹದ ಹಿನ್ನೆಲೆ ಕುಡಿದ ಅಮಲಿನಲ್ಲಿ ಸಂಬಂಧಿಕನ ಮನೆಗೆ ನುಗ್ಗಿ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ನಡೆದಿದೆ. 45 ವರ್ಷದ ದೊಡ್ಡರಾಜು ಎಂಬಾತ ಮೃತ ದುರ್ದೈವಿ.
ಮೈಸೂರು : ಕುಡಿದ ಅಮಲಿನಲ್ಲಿ ಸಂಬಂಧಿಕನನ್ನ ಕೊಲೆಗೈದ ಆರೋಪಿ ಬಂಧನ - ಮೈಸೂರು ಕ್ರೈಮ್ ನ್ಯೂಸ್
ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಬಿಳಿಕೆರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಕೌಟುಂಬಿಕ ಕಲಹ ಹಾಗೂ ಹಣಕಾಸಿನ ವಿಚಾರ ಕಾರಣ ಎಂದು ಗೊತ್ತಾಗಿದೆ..
ಮೈಸೂರು: ಕುಡಿದ ಅಮಲಿನಲ್ಲಿ ಸಂಬಂಧಿಕನನ್ನ ಕೊಲೆಗೈದ ಆರೋಪಿ ಬಂಧನ
ಕೊಲೆ ಆರೋಪಿ ಕೆಂಡನಾಯಕ ಪಾನಮತ್ತನಾಗಿ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಕೊಲೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಬಿಳಿಕೆರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಕೌಟುಂಬಿಕ ಕಲಹ ಹಾಗೂ ಹಣಕಾಸಿನ ವಿಚಾರ ಕಾರಣ ಎಂದು ಗೊತ್ತಾಗಿದೆ.