ಕರ್ನಾಟಕ

karnataka

ETV Bharat / crime

1.58 ಕೋಟಿ ರೂ. ಮೌಲ್ಯದ ಸಾವಿರ ಕೆಜಿ ಗಾಂಜಾ ವಶ.. ಇಬ್ಬರು ಅರೆಸ್ಟ್ - ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ)

1.58 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

DRI seizes 1,058 kg ganja worth Rs 1.58 crore in Bihar
1.58 ಕೋಟಿ ರೂ. ಮೌಲ್ಯದ ಸಾವಿರ ಕೆಜಿ ಗಾಂಜಾ ವಶಕ್ಕೆ

By

Published : Feb 19, 2021, 11:43 AM IST

ಮುಜಾಫರ್​ಪುರ: ಬಿಹಾರದ ಮುಜಾಫರ್​ಪುರ ಜಿಲ್ಲೆಯಲ್ಲಿ ಇಬ್ಬರನ್ನ ಬಂಧಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ), ಆರೋಪಿಗಳಿಂದ 1.58 ಕೋಟಿ ರೂ. ಮೌಲ್ಯದ 1,058 ಕೆಜಿ ಗಾಂಜಾ ವಶಪಡಿಸಿಕೊಂಡಿದೆ.

ನಿರ್ದಿಷ್ಟ ಮಾಹಿತಿಯ ಮೇರೆಗೆ ಮುಜಾಫರ್​ಪುರ- ದರ್ಭಂಗಾ ರಾಷ್ಟ್ರೀಯ ಹೆದ್ದಾರಿಯ ಮೈಥಿ ಟೋಲ್ ಪ್ಲಾಜಾ ಬಳಿ ಟ್ರಕ್​ ಒಂದನ್ನು ತಡೆದಿರುವ ಡಿಆರ್​ಐ ಅಧಿಕಾರಿಗಳು, ಗಾಂಜಾ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮರಣದಂಡನೆಗೆ ಒಳಗಾಗಲಿರುವ ಸ್ವತಂತ್ರ ಭಾರತದ ಮೊದಲ ಮಹಿಳೆ.. ರಾಷ್ಟ್ರಪತಿ ಬಳಿ ಮಗನ ಮನವಿ

ತ್ರಿಪುರದ ಉದಯಪುರದಲ್ಲಿ ಗಾಂಜಾವನ್ನು ಲೋಡ್​ ಮಾಲಾಗಿದ್ದು, ಅದನ್ನು ಬಿಹಾರದ ಹಾಜಿಪುರಕ್ಕೆ ಸಾಗಿಸಲಾಗುತ್ತಿತ್ತು. ಚಾಲಕ ಸೇರಿ ಇನ್ನೊಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದ್ದು, 1985ರ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details