ಕರ್ನಾಟಕ

karnataka

ETV Bharat / crime

ಮಗನ ಸಾವಿನ ಖಿನ್ನತೆ, ರೈಲಿಗೆ ತಲೆಕೊಟ್ಟು ತಂದೆ ಆತ್ಮಹತ್ಯೆ - ಅಂಕೋಲಾ ತಾಲೂಕಿನ ಹಟ್ಟಿಕೇರಿ

ಕಳೆದ ಎರಡು ವರ್ಷದ ಹಿಂದೆ 25 ವರ್ಷದ ಮಗ ವಿನಾಯಕ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದ.‌ ಮಗನ ಸಾವಿನಿಂದ ಖಿನ್ನತೆಗೊಳಗಾಗಿದ್ದ ತಂದೆ ಇಂದು ಹಟ್ಟಿಕೇರಿ ಸಮೀಪದ ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

death-suicide-of-father-in-karwar-news
ರೈಲಿಗೆ ತಲೆಕೊಟ್ಟು ತಂದೆ ಆತ್ಮಹತ್ಯೆ

By

Published : Apr 21, 2021, 8:57 PM IST

ಕಾರವಾರ:ಮಗನ ಸಾವಿನಿಂದ ಖಿನ್ನತೆಗೊಳಗಾಗಿದ್ದ ನಿವೃತ್ತ ಆರ್​​ಎಫ್​​ಒ ಒಬ್ಬರು, ಮಗನಂತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಸಮೀಪದ ರೈಲ್ವೆ ಹಳಿ ಮೇಲೆ ನಡೆದಿದೆ.

ರೈಲಿಗೆ ತಲೆಕೊಟ್ಟು ತಂದೆ ಆತ್ಮಹತ್ಯೆ

ಓದಿ: ನಾಳೆಯಿಂದ ಪೂರ್ಣ ಪ್ರಮಾಣದ ಸಾರಿಗೆ ಸೇವೆ: ಡಿಸಿಎಂ ಸವದಿ ಘೋಷಣೆ

ಅಂಕೋಲಾದ ಪಳ್ಳಿಕೇರಿ ನಿವಾಸಿ ಗಜಾನನ ನಾಯ್ಕ (70) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.‌ ಕಳೆದ ಎರಡು ವರ್ಷದ ಹಿಂದೆ 25 ವರ್ಷದ ಮಗ ವಿನಾಯಕ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದ.‌ ಮಗನ ಸಾವಿನಿಂದ ಖಿನ್ನತೆಗೊಳಗಾಗಿದ್ದ ತಂದೆ ಇಂದು ಹಟ್ಟಿಕೇರಿ ಸಮೀಪದ ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯಲ್ಲಿ ಗಜಾನನ ಅವರ ರುಂಡ - ಮುಂಡ ಬೇರ್ಪಟ್ಟಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details