ಹೈದರಾಬಾದ್: ಶಂಶಾಬಾದ್‌ನಲ್ಲಿ ಕಾರು ಹಾಗೂ ಲಾರಿ ಢಿಕ್ಕಿಯಾದ ಪರಿಣಾಮ ನಿನ್ನೆ ಆರು ಮಂದಿ ಸಾವನ್ನಪ್ಪಿದ್ದರು. ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಯುವಕ ಇಂದು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ಏಳಕ್ಕೆ ಏರಿದೆ. ಈ ಅಪಘಾತಕ್ಕೆ ಕಾರಣವಾದ ವ್ಯಕ್ತಿಯನ್ನು ಮಾಧಾಪುರ ಕಾನ್‌ಸ್ಟೆಬಲ್ ಗಿರಿಪ್ರಸಾದ್ ಎಂದು ಗುರುತಿಸಲಾಗಿದೆ.
ಮಾಧಾಪುರ ಕಾನ್‌ಸ್ಟೆಬಲ್ ಗಿರಿಪ್ರಸಾದ್, ಅವನ ಗೆಳೆಯರಾದ ಸಂಗಮೇಶ್ವರ ಮತ್ತು ಮಲ್ಲೇಶ್ ಒಂದೇ ಸ್ಟೇಶನ್ನಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಭಾನುವಾರ ಬೆಳಿಗ್ಗೆ ಕಾರಿನಲ್ಲಿ ಯಾದಗಿರಿ ಗುಟ್ಟ ದೇವಸ್ಥಾನಕ್ಕೆ ಹೋಗಿದ್ದರು. ಹಿಂದಿರುಗುವಾಗ ಮದ್ಯ ಸೇವಿಸಿ ರ‍್ಯಾಶ್ ಡ್ರೈವ್ ಮಾಡುತ್ತಿದ್ದರು.