ಕರ್ನಾಟಕ

karnataka

ETV Bharat / crime

ರಾಯಚೂರು: ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ, ತನಿಖೆ ಆರಂಭ - ರಾಯಚೂರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಸುಟ್ಟು ಕರಕಲಾದ ಶವವೊಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದ ಹೊರವಲಯದಲ್ಲಿರುವ ಹೊಲದಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

dead-body-found-in-raichur
ರಾಯಚೂರು:ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ, ತನಿಖೆ ಆರಂಭ

By

Published : May 10, 2022, 10:45 AM IST

Updated : May 10, 2022, 11:11 AM IST

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದ ಹೊರವಲಯದಲ್ಲಿರುವ ಹೊಲದಲ್ಲಿ ಸುಟ್ಟು ಕರಕಲಾದ ಶವ ದೊರೆತಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗದ ಸ್ಥಿತಿಯಲ್ಲಿದೆ. ವಯಸ್ಸು ಸುಮಾರು 35 ವರ್ಷ ಇರಬಹುದೆಂದು ಹೇಳಲಾಗುತ್ತಿದೆ.

ಮೃತದೇಹವನ್ನು ಕಂಡ ಸ್ಥಳೀಯರು‌‌ ಪೊಲೀಸರಿಗೆ ದೂರು ನೀಡಿದ್ದು, ಬಳಗಾನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಉಳಿದ ಭಾಗಗಳನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ರವಾನಿಸಲಾಗಿದೆ. ಕೊಲೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ರಸ್ತೆ ವಿಭಜಕ ದಾಟಿ ಟಿಟಿ ವಾಹನಕ್ಕೆ ಕಾರು ಡಿಕ್ಕಿ: ಇಬ್ಬರು ದುರ್ಮರಣ, ಹಲವರಿಗೆ ಗಾಯ

Last Updated : May 10, 2022, 11:11 AM IST

ABOUT THE AUTHOR

...view details