ಕರ್ನಾಟಕ

karnataka

ETV Bharat / crime

ಸೋಂಕಿತ ತಂದೆ ಕಣ್ಣೆದುರೇ ಸಾಯುತ್ತಿದ್ದಂತೆ ಮುಗಿಲು ಮುಟ್ಟಿದ ಮಗಳ ಆಕ್ರಂದನ - ಕೊರೊನಾ ಸೋಂಕಿತ ಸಾವು

ತಾಯಿ ತನ್ನ ಮಗಳನ್ನು ದೂರ ಕರೆದೊಯ್ಯುತ್ತಿದ್ದರೂ, ಹುಡುಗಿ ತನ್ನ ತಂದೆಯ ಬಾಯಿಗೆ ನೀರು ಸುರಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು..

daughter-breaks-down-as-covid-positive-father-breathes-his-last
daughter-breaks-down-as-covid-positive-father-breathes-his-last

By

Published : May 3, 2021, 3:39 PM IST

ಶ್ರೀಕಾಕುಳಂ(ಆಂಧ್ರಪ್ರದೇಶ) :ಕೊರೊನಾ ವೈರಸ್​ನ ಎರಡನೇ ಅಲೆ ದೇಶಾದ್ಯಂತ ವ್ಯಾಪಿಸುತ್ತಿದ್ದು, ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ.

ಹುಡುಗಿಯೊಬ್ಬಳು ಕೊರೊನಾ ಸೋಂಕಿತ ತನ್ನ ತಂದೆ ಕಣ್ಣೆದುರೇ ಸಾವನ್ನಪ್ಪಿದ್ದನ್ನು ನೋಡಿ ದುಃಖದಿಂದ ಅಳುತ್ತಿರುವ ಘಟನೆ ಮನಕಲುಕುವಂತಿದೆ.

ತಂದೆ ಸಾವಿನಿಂದ ಮಗಳ ಆಕ್ರಂದನ..

ತಾಯಿ ತನ್ನ ಮಗಳನ್ನು ದೂರ ಕರೆದೊಯ್ಯುತ್ತಿದ್ದರೂ, ಹುಡುಗಿ ತನ್ನ ತಂದೆಯ ಬಾಯಿಗೆ ನೀರು ಸುರಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿ.ಸಿಗದಮ್ ಮಂಡಲದಲ್ಲಿ ಭಾನುವಾರ ನಡೆದಿದೆ.

ಜಗನ್ನಾಥ್ವಾಲಸಾ ಪಂಚಾಯತ್ ಮೂಲದ ಅಸಿರಿನಾಯುಡು (44) ವಿಜಯವಾಡದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಇತ್ತೀಚೆಗೆ ಕೊರೊನಾ ದೃಢಪಟ್ಟಿತ್ತು. ತನ್ನ ಕುಟುಂಬದೊಂದಿಗೆ ಊರಿಗೆ ಆಗಮಿಸಿದಾಗ ಪ್ರತ್ಯೇಕ ಪ್ರದೇಶದಲ್ಲಿ ಇರುವಂತೆ ಸಲಹೆ ನೀಡಲಾಗಿತ್ತು.

ಆದರೆ, ಇದ್ದಕ್ಕಿದ್ದಂತೆ ಆಸಿರಿನಾಯುಡು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರು ನೆಲಕ್ಕೆ ಬಿದ್ದರೂ ಭಯದಿಂದ ಯಾರೂ ಕೂಡ ಸಹಾಯಕ್ಕೆ ಬರಲಿಲ್ಲ.

ABOUT THE AUTHOR

...view details