ಕರ್ನಾಟಕ

karnataka

ETV Bharat / crime

ಡ್ಯಾನ್ಸರ್​​ ಮೇಲೆ ಗುತ್ತಿಗೆದಾರ ಮತ್ತು ಸಹಚರರಿಂದ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು

ಸಾಮೂಹಿಕ ಅತ್ಯಾಚಾರ ಮಾಡಿ ಚಿತ್ರೀಕರಣ ಮಾಡಿರುವ ದುರುಳರು, ಈ ಘಟನೆ ಬಗ್ಗೆ ಬಾಯ್ಬಿಟ್ಟರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರಂತೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಗುತ್ತಿಗೆದಾರ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎನ್ನಲಾಗಿದೆ.

ಡ್ಯಾನ್ಸರ್​​ ಮೇಲೆ ಗುತ್ತಿಗೆದಾರರ ಮತ್ತು ಸಹಚರರಿಂದ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು
Dancer gang-raped by contractor, 10 aides in UP

By

Published : Mar 1, 2022, 9:37 AM IST

ಕಾನ್ಪುರ( ಉತ್ತರಪ್ರದೇಶ): ನರ್ತಕಿಯೊಬ್ಬಳ ಮೇಲೆ ಗುತ್ತಿಗೆದಾರ ಮತ್ತು ಆತನ ಹತ್ತು ಮಂದಿ ಸಹಾಯಕರು ಸಾಮೂಹಿಕ ಅತ್ಯಾಚಾರ ಎಸಗಿ ಚಿತ್ರೀಕರಣ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬಿತ್ತೂರ್ ಪ್ರದೇಶದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಸಾಮೂಹಿಕ ಅತ್ಯಾಚಾರ ಮಾಡಿ ಚಿತ್ರೀಕರಣ ಮಾಡಿರುವ ದುರುಳರು, ಈ ಘಟನೆ ಬಗ್ಗೆ ಬಾಯ್ಬಿಟ್ಟರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂತ್ರಸ್ತೆಗೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಗುತ್ತಿಗೆದಾರ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎನ್ನಲಾಗಿದೆ. ನರ್ತಕಿ ಮೇಲೆ ಫೆಬ್ರವರಿ 6ರ ರಂದೇ ಈ ಅತ್ಯಾಚಾರ ಎಸಗಲಾಗಿದೆಯಂತೆ, ಸಂತ್ರಸ್ಥೆ ಸೋಮವಾರ ಬರ್ರಾ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ದೂರಿನಲ್ಲಿ ಏನಿದೆ?:ತಾನು ವೃತ್ತಿಪರ ನರ್ತಕಿಯಾಗಿದ್ದು, ಗುತ್ತಿಗೆದಾರನಾಗಿರುವ ದೇವ ಸರ್ದಾರ್ ಎಂಬಾತ ಫೆಬ್ರವರಿ 6 ರಂದು ಜಿಲ್ಲೆಯ ಬಿತ್ತೂರ್ ಪ್ರದೇಶದ ತೋಟದ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಿದ್ದ ಎಂದು ಸಂತ್ರಸ್ತೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ.

ಗುತ್ತಿಗೆದಾರದ ಆಹ್ವಾನದಂತೆ ಆತನ ತೋಟದ ಮನೆ ತಲುಪಿದಾಗ ಪ್ರದರ್ಶನ ನೀಡಲು ವೇದಿಕೆ ಸಿಕ್ಕಿರಲಿಲ್ಲ, ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ, ಆಗ ಗುತ್ತಿಗೆದಾರ ಮತ್ತು ಆತನ ಸಹಚರರು, ಜಮೀನಿನ ಕೊಠಡಿಯೊಂದರಲ್ಲಿ ಪ್ರದರ್ಶನ ನೀಡಿದರೆ ಉತ್ತಮ ಹಣ ನೀಡುವುದಾಗಿ ಹೇಳಿದ್ದರು. ಇದಕ್ಕೆ ನಾನು ಒಪ್ಪಿಕೊಂಡಿದ್ದೆ, ಕೊಟ್ಟ ಮಾತಿನಂತೆ ತೋಟದಲ್ಲಿರುವ ರೂಮ್​​​​ವೊಂದಕ್ಕೆ ತೆರಳಿ ಪ್ರದರ್ಶನ ನೀಡುತ್ತಿದ್ದೆ, ಈ ವೇಳೆ ಆಯೋಜಕರು ನೀಡಿದ ತಂಪು ಪಾನೀಯ ಕುಡಿದು ಪ್ರಜ್ಞೆ ತಪ್ಪಿದ್ದೆ, ಈ ವೇಳೆ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಕೃತ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾಳೆ

ಇದನ್ನು ಓದಿ:ನಮ್ಮನ್ನು ರಕ್ಷಿಸಿ'....ಉಕ್ರೇನ್​​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಅಳಲು!

ಸಂತ್ರಸ್ತೆಯ ದೂರು ಸ್ವೀಕರಿಸಿರುವ ಪೊಲೀಸರು ಎಫ್​​ಐಆರ್​​​ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಬಾರ್ರಾ ಪೊಲೀಸ್‌ ಠಾಣೆಯ ಪ್ರಭಾರಿ ದೀನಾನಾಥ್‌ ಮಿಶ್ರಾ ಈ ಬಗ್ಗೆ ಮಾಹಿತಿ ನೀಡಿದ್ದು, ತನಿಖೆ ಪ್ರಗತಿಯಲ್ಲಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ಆರೋಪಿಗಳಾದ ದೇವ ಸರ್ದಾರ್, ಮೋಹಿತ್ ಮತ್ತು ಶೋಭಿತ್ ಮತ್ತು ಇತರ 7-8 ಅಪರಿಚಿತ ಪುರುಷರ ವಿರುದ್ಧ ಐಪಿಸಿ ಸೆಕ್ಷನ್ 328, 376 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ರ ಅಡಿ ಎಫ್​​​ಐಆರ್​​ ದಾಖಲಿಸಲಾಗಿದೆ ಎಂದು ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details