ಕರ್ನಾಟಕ

karnataka

ETV Bharat / crime

ತ್ರಿಶೂರ್‌ನಲ್ಲಿ 1.28 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ - ಕೇರಳ ಕಸ್ಟಮ್​ ಅಧಿಕಾರಿಗಳು

ಅಕ್ರಮವಾಗಿ ವಿದೇಶಿ ಹಣ ವಿನಿಮಯ ನಡೆಸುತ್ತಿದ್ದ ಏಜೆನ್ಸಿ ಮೇಲೆ ದಾಳಿ ನಡೆಸಿರುವ ಕೊಚ್ಚಿಯ ಕಸ್ಟಮ್ಸ್ ಅಧಿಕಾರಿಗಳು 1.28 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ಹಾಗೂ 44.56 ಲಕ್ಷ ರೂ. ನಗದನ್ನೂ ವಶಪಡಿಸಿಕೊಂಡಿದ್ದಾರೆ.

foreign currency
ತ್ರಿಶೂರ್‌ನಲ್ಲಿ 1.28 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ

By

Published : Jan 25, 2021, 10:39 AM IST

ಕೊಚ್ಚಿ (ಕೇರಳ): ತ್ರಿಶೂರ್‌ನ ಗುರುವಾಯೂರ್‌ನಲ್ಲಿನ ವಿದೇಶಿ ಹಣ ವಿನಿಮಯ ಏಜೆನ್ಸಿಯೊಂದರಲ್ಲಿ 1.28 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಸ್ಟಮ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಏಜೆನ್ಸಿಯ ಬಳಿ ಯಾವುದೇ ಸೂಕ್ತ ದಾಖಲೆಗಳೂ ಇಲ್ಲ, ಪರವಾನಿಗೆಯೂ ಇಲ್ಲ. ಅಕ್ರಮವಾಗಿ ಹಣ ವಿನಿಮಯದ ಚಟುವಟಿಕೆ ನಡೆಸುತ್ತಿದ್ದರು ಎಂದು ಕೊಚ್ಚಿಯ ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: 1.75 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳ ಸಾಗಣೆ: ದುಬೈನಿಂದ ಚೆನ್ನೈಗೆ ಆಗಮಿಸಿದ ಐವರ ಬಂಧನ

ವಿದೇಶಿ ಕರೆನ್ಸಿಯೊಂದಿಗೆ 44.56 ಲಕ್ಷ ರೂ. ನಗದನ್ನೂ ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ತನಿಖೆ ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details