ಕುಷ್ಟಗಿ:ಪತ್ನಿಯ ಸಾವು ಅರಗಿಸಿಕೊಳ್ಳಲಾಗದ ಪತಿಯೂ ಮೃತಪಟ್ಟಿರುವ ಘಟನೆ ಕುಷ್ಟಗಿ ತಾಲೂಕು ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊನ್ನಮ್ಮ ಶಿವಪ್ಪ ತಳವಾರ (56) ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ(ನಿನ್ನೆ) ನಿಧನರಾಗಿದ್ದರು. ಬಾಳಸಂಗಾತಿಯ ಅಗಲಿಕೆಯ ನೋವು ತಡೆದುಕೊಳ್ಳಲಾಗದೇ ಪತಿ ಶಿವಪ್ಪ ತಳವಾರ (60) ಕೂಡಾ ಅದೇ ದಿನ ರಾತ್ರಿಯೇ ಸುಮಾರು 10 ಗಂಟೆಗೆ ಏಕಾಏಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಪತ್ನಿಯ ಸಾವಿನ ನೋವು ತಾಳಲಾರದೆ ಶಿವಪ್ಪ ತಳವಾರ ಮನೆಯಲ್ಲಿ ರಾತ್ರಿ ದಿಢೀರ್ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಇಬ್ಬರೂ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.