ಕರ್ನಾಟಕ

karnataka

ETV Bharat / crime

ಹಿರಿಯೂರಲ್ಲಿ ಚಾಕೋಲೆಟ್ ಆಸೆ ತೋರಿಸಿ ಮಗು ಕಿಡ್ನಾಪ್​.. ಒಂದೇ ದಿನದಲ್ಲಿ ಮಕ್ಕಳ ಕಳ್ಳಿ ಅರೆಸ್ಟ್​ - ಹಿರಿಯೂರು ನಗರದ ಕಟುಗರಹಳ್ಳ ಬಡಾವಣೆ

ಚಾಕೋಲೆಟ್ ಆಸೆ ತೋರಿಸಿ ಮಕ್ಕಳನ್ನು ಅಪಹರಿಸುತ್ತಿದ್ದ ಕಳ್ಳಿಯನ್ನು ಹಿರಿಯೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Arrest
Arrest

By

Published : Aug 1, 2021, 1:30 PM IST

ಚಿತ್ರದುರ್ಗ: ಜಿಲ್ಲೆಯ ಪೋಷಕರಲ್ಲಿ ಆತಂಕ ಮೂಡಿಸಿದ್ದ ಖತರ್ನಾಕ್​ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಟವಾಡುತ್ತಿದ್ದ ಮಕ್ಕಳಿಗೆ ಚಾಕೋಲೆಟ್ ಕೊಡಿಸುವುದಾಗಿ ನಂಬಿಸಿ ಅಪಹರಿಸುತ್ತಿದ್ದ ಮಕ್ಕಳ ಕಳ್ಳತನದ ಆರೋಪಿ ಕೈಗೆ ಹಿರಿಯೂರು ಪೊಲೀಸರು ಕೋಳ ತೊಡಿಸಿದ್ದಾರೆ.

ಹಿರಿಯೂರು ನಗರದ ಕಟುಗರಹಳ್ಳ ಬಡಾವಣೆಯಲ್ಲಿ ಶನಿವಾರ ಬೆಳಗ್ಗೆ ಮನೆ ಹೊರಗಡೆ ಆಟವಾಡುತ್ತಿದ್ದ ಹೆಣ್ಣು ಮಗುವನ್ನು ಅಪಹರಿಸಲಾಗಿತ್ತು. ಈ ಅಪರಿಚಿತ ಮಹಿಳೆ ಬೀದಿ ಬದಿ ಅಂಗಡಿಯಲ್ಲಿ ಮಗುವಿಗೆ ಚಾಕೋಲೆಟ್ ಖರೀದಿಸಿ ಕೊಡುವುದನ್ನು ನೋಡಿದ ಸ್ಥಳೀಯರು, ಮಗುವಿನ ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಪೋಷಕರು ಹಿರಿಯೂರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯರ ಸಹಾಯದಿಂದ ಮಕ್ಕಳ ಕಳ್ಳಿಯನ್ನು ಹಿರಿಯೂರು ತಾಲೂಕಿನ ಭೀಮನ ಬಂಡೆ ಗ್ರಾಮದ ಬಳಿ ಪೊಲೀಸರು ಬಂಧಿಸಿದ್ದಾರೆ.

ಮಗುವನ್ನು ಪೋಷಕರಿಗೆ ಒಪ್ಪಿಸಿದ ಪೊಲೀಸರು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details