ಕರ್ನಾಟಕ

karnataka

ETV Bharat / crime

ಮಕ್ಕಳ ಅಶ್ಲೀಲ ಚಿತ್ರದ ಜಾಲ; ಎನ್​ಆರ್​ಐ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ - ಈಟಿವಿ ಭಾರತ್​ ಕನ್ನಡ

ತಿರುಚ್ಚಿಯ ಆತನ ಮನೆ ಮೇಲೆ ನಡೆದ ದಾಳಿ ವೇಳೆ ಸಿಬಿಐ ಅಧಿಕಾರಿಗಳು ಪ್ರಮುಖ ದಾಖಲೆ, ಹಾರ್ಡ್​ ಡಿಸ್ಕ್​, ಲ್ಯಾಪ್​ಟಾಪ್​ ಮತ್ತು ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಮಕ್ಕಳ ಅಶ್ಲೀಲ ಚಿತ್ರದ ಜಾಲ; ಎನ್​ಆರ್​ಐ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ
child-pornography-network-cbi-registered-case-against-nri

By

Published : Dec 3, 2022, 2:30 PM IST

ಚೆನ್ನೈ:ಮಕ್ಕಳ ಅಶ್ಲೀಲ ಚಿತ್ರದ ಜಾಲ ನಡೆಸುತ್ತಿದ್ದ ಎನ್ಆರ್​ ವಿರುದ್ಧ ಕೇಂದ್ರ ತನಿಖಾ ದಳ ದೂರು ದಾಖಲಿಸಿದೆ. ತಿರುಚ್ಚಿ ಬಳಿಯ ಮನಪರೈನ ನಿವಾಸಿ ರಾಜ ಸುಬ್ರಮಣಿಯನ್​ ಆಲಿಯಾಸ್​ ಸ್ಯಾಮ್​ ಜಾನ್ಸ್​ ಆಲಿಯಾಸ್​ ಆದಿತ್ಯ ಕರಿಗಾಲನ್​. ಈತ ಜರ್ಮನಿಗೆ ಸ್ಥಳಾಂತರಗೊಂಡಿದ್ದಾನೆ.

ತಿರುಚ್ಚಿಯ ಆತನ ಮನೆ ಮೇಲೆ ನಡೆದ ದಾಳಿ ವೇಳೆ ಸಿಬಿಐ ಅಧಿಕಾರಿಳು ಪ್ರಮುಖ ದಾಖಲೆ, ಹಾರ್ಡ್​ ಡಿಸ್ಕ್​, ಲ್ಯಾಪ್​ಟಾಪ್​ ಮತ್ತು ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಜರ್ಮನಿ ಇಂಟರ್​ಪೋಲ್​ನ ಗುಪ್ತಚರದಳ ನೀಡಿದ ನಿರ್ದಿಷ್ಟ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಈತ ಆನ್​ಲೈನ್​ ಮೂಲಕ ಮಕ್ಕಳ ಅಶ್ಲೀಲ ಚಿತ್ರವನ್ನು ವಿತರಣೆ ಮಾಡುತ್ತಿದ್ದ. ದೆಹಲಿಯ ಸಿಬಿಐ ಅಧಿಕಾರಿಗಳು ತಿರುಚ್ಚಿಯಲ್ಲಿ ಈ ದಾಳಿ ನಡೆಸಿದ್ದಾರೆ.

ತಿರುಚ್ಚಿ ಜಿಲ್ಲಾ ನ್ಯಾಯಾಲಯದ ಅನುಮತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಈ ಜಾಲದ ಭಾಗಿಯಾಗಿದ್ದ ರಾಜ ಆರೋಪಿ ಆಗಿದ್ದಾನೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಡ್ರಗ್ಸ್​​ ಬಲೆಯಲ್ಲಿ ಸಿಕ್ಕಿ ಟೆಕ್ಕಿಗಳು, ವಿದ್ಯಾರ್ಥಿಗಳು ವಿಲವಿಲ.. ಎರಡು ತಿಂಗಳಲ್ಲಿ 27 ಆರೋಪಿಗಳ ಬಂಧನ

ABOUT THE AUTHOR

...view details