ಭಾಗಲ್ಪುರ (ಬಿಹಾರ):ಗಂಡ ಮತ್ತು ಹೆಂಡ್ತಿ ಜಗಳದಲ್ಲಿ ಮೂರು ವರ್ಷದ ಅಮಾಯಕ ಮಗು ಪ್ರಾಣ ಕಳೆದುಕೊಂಡಿದೆ. ಇದೇ ಕೌಟುಂಬಿಕ ಕಲಹದಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು ಸೇರಿ ನಾಲ್ವರು ಆಸ್ಪತ್ರೆ ಸೇರಿದ್ದಾರೆ. ಬಿಹಾರದ ಭಾಗಲ್ಪುರ್ ಜಿಲ್ಲೆಯ ಸೋನ್ಬರ್ಸಾದಲ್ಲಿ ಈ ಘಟನೆ ನಡೆದಿದೆ.
ಯಾವುದೇ ವಿಷಯವಾಗಿ ಗಂಡ ಮತ್ತು ಹೆಂಡ್ತಿ ನಡುವೆ ಜಗಳ ಶುರುವಾಗಿದೆ. ನಂತರ ಇದು ತೀರ ವಿಕೋಪಕ್ಕೆ ತಿರುಗಿ ಇಬ್ಬರೂ ಕತ್ತಿ ಮತ್ತು ಚಾಕು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಇದರಿಂದ ದಂಪತಿ ಹಾಗೂ ಮೂವರು ಮಕ್ಕಳು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ 3 ವರ್ಷದ ಮಗು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.