ಮುಂಬೈ :1999ರಲ್ಲಿ ಬಾಂದ್ರಾದಲ್ಲಿ ಗುಂಡಿನ ದಾಳಿ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಪಾತಕಿ ಛೋಟಾ ರಾಜನ್ ಹಾಗೂ ಇತರರ ವಿರುದ್ಧ ದಾಖಲಾಗಿರುವ ಎಂಸಿಒಸಿಎ ಪ್ರಕರಣದಲ್ಲಿ ಮುಂಬೈನ ವಿಶೇಷ ಕೋರ್ಟ್ ಆರೋಪಿ ರಾಜನ್‌ನನ್ನು ಬಂಧನ ಮುಕ್ತಗೊಳಿಸಿದೆ.
ಮುಂಬೈನ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿ 1999ರ ಮಾರ್ಚ್ 1ರಂದು ಐವರು ವ್ಯಕ್ತಿಗಳು ಹಾಗೂ ಓರ್ವ ಯುವತಿ ಮೇಲೆ ಗುಂಡು ಹಾರಿಸಲಾಗಿತ್ತು. ಆರು ಮಂದಿಯ ಪೈಕಿ ಐವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಪ್ರಕರಣದಲ್ಲಿ ಛೋಟಾ ರಾಜನ್ ಹಾಗೂ ಇತರರನ್ನು ಆರೋಪಿಗಳನ್ನಾಗಿ ಮಾಡಿ ಎಂಸಿಒಸಿಎ ಪ್ರಕರಣ ದಾಖಲಾಗಿತ್ತು.
ಕೋರ್ಟ್‌ನಲ್ಲಿಂದು ಛೋಟಾ ರಾಜನ್ ಪರ ವಾದ ಮಂಡಿಸಿದ ವಕೀಲ ತುಷಾರ್ ಸೈಲ್, ಪ್ರಕರಣದಲ್ಲಿ ಛೋಟಾ ರಾಜನ್ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ. ಆತನ್ನು ಬಂಧಿಸಿಲಾಗಿದೆ.
ಪ್ರಾಸಿಕ್ಯೂಷನ್ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳಿಗೆ ಯಾವುದೇ ನಿರ್ದಿಷ್ಟ ಪಾತ್ರವನ್ನು ನಿಗದಿಪಡಿಸಲಾಗಿಲ್ಲ. ತನಿಖೆಯು ಅನುಮಾನಗಳಿಂದ ತುಂಬಿದೆ. ಅರ್ಜಿದಾರರ ವಿರುದ್ಧ ಯಾವುದೇ ಸಮರ್ಥ ಸಾಕ್ಷ್ಯ ಸಂಗ್ರಹಿಸಲಾಗಿಲ್ಲ ಎಂದು ಹೇಳಿದ್ದಾರೆ.
ಛೋಟಾ ರಾಜನ್ ಆರೋಪ ಸಾಬೀತಿಗೆ ಪುರಾವೆ ಕೊರತೆ!
ಅರ್ಜಿದಾರರು ಚಾರ್ಜ್‌ಶೀಟ್‌ನಲ್ಲಿ ಛೋಟಾ ರಾಜನ್ ಎಂದು ನಮೂದಿಸಿದ ವ್ಯಕ್ತಿ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ. ಆರೋಪಿಗಳ ಗುರುತಿನ ಬಗ್ಗೆ ಇಡೀ ಚಾರ್ಜ್‌ಶೀಟ್‌ನಲ್ಲಿ ಪುರಾವೆಗಳು ಇಲ್ಲ ಎಂದಿದ್ದಾರೆ. ಎರಡೂ ಕಡೆಯ ಪ್ರಾಸಿಕ್ಯೂಷನ್ ಹಾಗೂ ಪ್ರತಿವಾದಗಳ ವಾದವನ್ನು ಆಲಿಸಿದ ನ್ಯಾಯಾಲಯವು ಛೋಟಾ ರಾಜನ್ ಬಿಡುಗಡೆಗೆ ಸೂಚಿಸಿದೆ.
1999ರ ಮಾರ್ಚ್ 1ರಂದು ಬಾಂದ್ರಾದ ಪಹಲ್ವಿ ಹೋಟೆಲ್ ಬಳಿ ಐವರು ಪುರುಷರು ಹಾಗೂ ಓರ್ವ ಯುವತಿ ಮೇಲೆ ಗುಂಡು ಹಾರಿಸಲಾಗಿತ್ತು. ಪೊಲೀಸರ ತಂಡ ಘಟನಾ ಸ್ಥಳಕ್ಕೆ ಬಂದು ಗಾಯಾಗಳುಗಳನ್ನು ಬಾಬಾ ಆಸ್ಪತ್ರೆಗೆ ದಾಖಲಿಸಿತ್ತು. ಚಿಕಿತ್ಸೆ ಫಲಿಸದೆ ಅದೇ ದಿನ ಐವರು ಸಾವನ್ನಪ್ಪಿದ್ದರು.
ಗಂಗಾರಾಮ್ ಬಾಬುಲಾಲ್ ಗುಪ್ತಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಆರಂಭದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನಂತರ ಪೊಲೀಸರು ತಮ್ಮ ತನಿಖೆಯ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿದ್ದರು.
ಅಜಯ್ ಸುರೇಶ್ ಮೋಹಿತೆ ಅಲಿಯಾಸ್ ಅಜಯ್ ಸೂರಜ್‌ಭಾನ್ ಶ್ರೇಷ್ಠ ಅಲಿಯಾಸ್ ಅಜಯ್ ನೇಪಾಳಿ, ರಾಜನ್ ಸದಾಶಿವ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್, ಹೇಮಂತ್ ರಾಮಣ್ಣ ಪೂಜಾರಿ, ಕುಂದನ್‌ಸಿಂಗ್ ನರಸಿಂಗ್ ರಾವತ್, ಸಮ್ಮರ್ ಅಶೋಕ್ ಮಾಣಿಕ್ ಮತ್ತು ವಿಕ್ರಾಂತ್ ಅಲಿಯಾಸ್ ವಿಕ್ಕಿ ಮಲ್ಹೋತ್ರಾ ಆರೋಪಿಗಳು ಎಂದು ಗುರುತಿಸಲಾಗಿತ್ತು.
2004ರಲ್ಲಿ ವಿಶೇಷ ನ್ಯಾಯಾಲಯವು ಸುರೇಶ್ ಮೋಹಿತೆ ಅವರನ್ನು ಖುಲಾಸೆಗೊಳಿಸಿತ್ತು. ಛೋಟಾ ರಾಜನ್ ವಿರುದ್ಧದ ಪ್ರಕರಣವು ಬಾಕಿ ಉಳಿದಿತ್ತು. ಇಂಡೋನೇಷ್ಯಾದಿಂದ ಗಡಿಪಾರಾದ ನಂತರ ಛೋಟಾ ರಾಜನ್ ವಿರುದ್ಧ ವಿಚಾರಣೆ ಆರಂಭವಾಗಿತ್ತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ