ರಾಯ್‌ಪುರ: ಶಂಕಿತ ಮಾವೋವಾದಿಗಳು ಪೊಲೀಸ್ ಕಾನ್ಸ್‌ಟೇಬಲ್‌ವೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿಂದು ನಡೆದಿದೆ. ರೇಖಾ ಘಾಟಿ ಪೊಲೀಸ್ ಕ್ಯಾಂಪ್‌ನಲ್ಲಿ ನಿಯೋಜಿಸಲಾದ ಕಾನ್‌ಸ್ಟೇಬಲ್ ನೆವ್ರು ಬೆಂಜಮ್ ಅವರು ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತಮ್ಮ ಕುಟುಂಬದೊಂದಿಗೆ ಗ್ರಾಮಕ್ಕೆ ಹೋಗಿದ್ದರು. ಸಮಾರಂಭದ ಸ್ಥಳದಲ್ಲಿದ್ದ ಸಂದರ್ಭದಲ್ಲಿ ಕೆಲವು ಅಪರಿಚಿತರು ಅವರ ಮೇಲೆ ಗುಂಡು ಹಾರಿಸಿದ್ದಾರೆ.
ಛತ್ತೀಸ್‌ಗಢ: ಶಂಕಿತ ಮಾವೋವಾದಿಗಳಿಂದ ಪೊಲೀಸ್ ಕಾನ್ಸ್‌ಟೇಬಲ್ ಹತ್ಯೆ - ಮರ್ಡೂಮ್ ಪೊಲೀಸ್ ಠಾಣೆ ವ್ಯಾಪ್ತಿ
ಘಟನೆ ನಡೆದ ತಕ್ಷಣವೇ ದಾಳಿಕೋರರು ದಟ್ಟ ಅರಣ್ಯಕ್ಕೆ ಓಡಿಹೋಗಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ಈ ಘಟನೆ ಮಾವೋವಾದಿಗಳ ಕೈವಾಡವೆಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
![ಛತ್ತೀಸ್‌ಗಢ: ಶಂಕಿತ ಮಾವೋವಾದಿಗಳಿಂದ ಪೊಲೀಸ್ ಕಾನ್ಸ್‌ಟೇಬಲ್ ಹತ್ಯೆ Chhattisgarh: Police constable shot dead by suspected Maoists](https://etvbharatimages.akamaized.net/etvbharat/prod-images/768-512-16887160-thumbnail-3x2-chd.jpg)
ಛತ್ತೀಸ್‌ಗಢ: ಶಂಕಿತ ಮಾವೋವಾದಿಗಳಿಂದ ಪೊಲೀಸ್ ಪೇದೆಯನ್ನು ಗುಂಡಿಕ್ಕಿ ಹತ್ಯೆ
ಈ ಹತೈಯು ರಾಜ್ಯ ರಾಜಧಾನಿ ರಾಯ್‌ಪುರದಿಂದ ಸುಮಾರು 300 ಕಿಮೀ ದೂರದಲ್ಲಿರುವ ಮರ್ಡೂಮ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾರಿಕೋದ್ರಿ ಗ್ರಾಮದಲ್ಲಿ ಮುಂಜಾನೆ 4.30 ರ ಸುಮಾರಿಗೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.