ಕರ್ನಾಟಕ

karnataka

ETV Bharat / crime

60 ವರ್ಷದ ವೃದ್ಧನನ್ನ ಮದುವೆಯಾಗುವುದಾಗಿ ನಂಬಿಸಿ ತಾಳಿ, ಕಾಲುಂಗುರ, ರೇಷ್ಮೆ ಸೀರೆ ಕದ್ದು ಮಹಿಳೆ ಪರಾರಿ - ಮದುವೆಯಾಗುವುದು ನಂಬಿಸಿ ವೃದ್ಧನಿಗೆ ವಂಚನೆ

ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಮಹಿಳೆ ಮದುವೆಯಾಗುವುದಾಗಿ ನಂಬಿಸಿ 60 ವರ್ಷದ ವೃದ್ಧ ತಂದಿದ್ದ ಚಿನ್ನದ ತಾಳಿ, ಕಾಲುಂಗುರ ಹಾಗೂ ರೇಷ್ಮೆ ಸೀರೆ ಕದ್ದು ಪರಾರಿಯಾಗಿರುವ ಘಟನೆ ಸಿಂಗದೂರಿನಲ್ಲಿ ನಡೆದಿದೆ. ಶಿವಮೊಗ್ಗದ ನಂಜುಂಡಪ್ಪ ಎಂಬುವರು ಮಹಿಳೆಯನ್ನ ನಂಬಿ ಮೋಸ ಹೋಗಿದ್ದಾರೆ.

cheats for 60-year-old man after second marriage in shimoga
60 ವರ್ಷದ ವೃದ್ಧನನ್ನ ಮದುವೆಯಾಗುವುದಾಗಿ ನಂಬಿಸಿ ತಾಳಿ, ಕಾಲುಂಗುರ, ರೇಷ್ಮೆ ಸೀರೆ ಕದ್ದು ಮಹಿಳೆ ಪರಾರಿ

By

Published : Dec 9, 2021, 5:48 PM IST

ಶಿವಮೊಗ್ಗ: 60 ವರ್ಷದ ವೃದ್ಧನನ್ನ ಎರಡನೇ ಮದುವೆಯಾಗುವುದಾಗಿ ನಂಬಿಸಿ ಮದುವೆಗೆ ತಂದಿದ್ದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗಿರುವ ಘಟನೆ ಸಿಂಗದೂರಿನಲ್ಲಿ ನಡೆದಿದೆ. ಭದ್ರಾವತಿ ತಾಲೂಕು ಕೆರೆಬೀರನಹಳ್ಳಿಯ ನಂಜುಂಡಪ್ಪ ಎಂಬುವವರು ಮಹಿಳೆಯ ಮಾತು ಕೇಳಿ ಮೋಸ ಹೋಗಿದ್ದಾರೆ.

ನಂಜುಂಡಪ್ಪ ಎಂಬುವರಿಗೆ‌ 60 ವಯಸ್ಸಾಗಿದ್ದು, ಇವರ ಪತ್ನಿ ತೀರಿ ಹೋಗಿದ್ದಾರೆ. ಮಕ್ಕಳಿದ್ದರೂ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಹಾಗೂ ಒಬ್ಬಂಟಿತನದಿಂದ ಬೇಜರಾಗಿ ಎರಡನೇ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಶಿವಮೊಗ್ಗದ ಮ್ಯಾಟ್ರಿಮೋನಿ ಕಚೇರಿಗೆ ಹೋಗಿ ತಮ್ಮ ಪ್ರೋಫೈಲ್ ಕೊಟ್ಟು ರಿಜಿಸ್ಟಾರ್ ಮಾಡಿಸಿದ್ದರು.

ನಂತರ ಮ್ಯಾಟ್ರಿಮೋನಿ ಮೂಲಕ ನಂಜುಂಡಪ್ಪನವರಿಗೆ ಬೆಂಗಳೂರಿನ ಚಂದ್ರಿಕಾ ಎಂಬಾಕೆ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಸಿಂಗದೂರಿನಲ್ಲಿ ಮದುವೆಯಾಗೋಣ ಎಂದು ಕರೆದು ಕೊಂಡು ಹೋಗಿದ್ದಾರೆ. ಈ ವೇಳೆ ತಾನು ಊಟ ಮಾಡಿ ಬರುವುದಾಗಿ ಹೇಳಿ ವಾಪಸ್‌ ಬಂದೇ ಇಲ್ಲ. ಎಷ್ಟೇ ಹುಡಕಾಟ ನಡೆಸಿದರೂ ಆಕೆಯ ಸುಳಿವೇ ಪತ್ತೆಯಾಗಿಲ್ಲ. ಮದುವೆಗೆಂದು ತಂದಿದ್ದ ಚಿನ್ನದ ತಾಳಿ, 4 ಬೆಳ್ಳಿ ಕಾಲುಂಗುರ, 2 ಬೆಳ್ಳಿ ಚೈನು, 2 ಬೆಳ್ಳಿ ಕೈ ಬಳೆ ಹಾಗೂ ರೇಷ್ಮೆ ಸೀರೆ ತೆಗೆದುಕೊಂಡು ಚಂದ್ರಿಕಾ ಪರಾರಿಯಾಗಿದ್ದಾಳೆ.

ಇದನ್ನೂ ಓದಿ:₹100 ಕೋಟಿ ಸಾಲ ನೀಡುವುದಾಗಿ ಉದ್ಯಮಿಗೆ 1.81 ಕೋಟಿ ವಂಚನೆ.. ಇಬ್ಬರು ಯುವತಿಯರು ಸೇರಿ ನಾಲ್ವರು ಅರೆಸ್ಟ್

For All Latest Updates

ABOUT THE AUTHOR

...view details