ಹುಬ್ಬಳ್ಳಿ:ಸರಳ ವಾಸ್ತು ಮುಖ್ಯಸ್ಥಚಂದ್ರಶೇಖರ್ ಗುರೂಜಿ ದೇಹಕ್ಕೆ ಹಂತಕರು ಸುಮಾರು 40 ಸೆಕೆಂಡುಗಳಲ್ಲಿ 54 ಬಾರಿ ಎದೆ, ಕುತ್ತಿಗೆ, ಶ್ವಾಸಕೋಶ, ಹೊಟ್ಟೆ ಸೇರಿದಂತೆ ದೇಹದ ಹಿಂಭಾಗಕ್ಕೆ ಚಾಕುವಿನಿಂದ ಇರಿದಿರುವುದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ. ಕುತ್ತಿಗೆಯ ಭಾಗಕ್ಕೆ 12 ಇಂಚಿನಷ್ಟು ಆಳಕ್ಕೆ ಇರಿದಿದ್ದಾರೆ. 54 ಬಾರಿ ಚಾಕು ಚುಚ್ಚಿದ್ದರಿಂದ ಗುರೂಜಿ ದೇಹದಲ್ಲಿ ತೀವ್ರ ಸ್ವರೂಪದ ರಕ್ತಸ್ರಾವವಾಗಿತ್ತು. ಚಾಕು ಇರಿದ ಮೂರೇ ನಿಮಿಷಗಳಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಚಂದ್ರಶೇಖರ್ ಗುರೂಜಿ ಮೃತದೇಹದಲ್ಲಿ 54 ಗಾಯದ ಗುರುತು: ಮರಣೋತ್ತರ ಪರೀಕ್ಷೆ ವರದಿ - chandrashekar guruji murder case
ಇತ್ತೀಚೆಗೆ ಅತ್ಯಂತ ಬರ್ಬರವಾಗಿ ಕೊಲೆಯಾದ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಅವರ ಮರಣೋತ್ತರ ಪರೀಕ್ಷಾ ವರದಿಯ ಮಾಹಿತಿ ಇಲ್ಲಿದೆ.
ಚಂದ್ರಶೇಖರ್ ಗುರೂಜಿ ಮರಣೋತ್ತರ ಪರೀಕ್ಷೆಯಲ್ಲಿ ಅಸಲಿ ಸತ್ಯ ಬಯಲು
ಸತತ 2 ಗಂಟೆ 40 ನಿಮಿಷಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುನೀಲ್ ಬಿರಾದಾರ ಮರಣೋತ್ತರ ಪರೀಕ್ಷೆ ನಡೆಸಿದ್ದು, ಗುರೂಜಿ ಸಾವಿನ ಕಾರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ.. ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಜೀವನ ಹೀಗಿತ್ತು