ಕರ್ನಾಟಕ

karnataka

ETV Bharat / crime

ರಾಜತಾಂತ್ರಿಕ ಅಧಿಕಾರಿಗೆ ಕಿರುಕುಳ ಆರೋಪ : ಓರ್ವನ ಬಂಧನ - ಚಂಡೀಗಢದಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್‌ ಕಚೇರಿ

ರಾಜತಾಂತ್ರಿಕ ಅಧಿಕಾರಿ ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹೌಸಿಂಗ್ ಬೋರ್ಡ್ ಲೈಟ್ ಪಾಯಿಂಟ್ ಬಳಿ ಆರೋಪಿಯನ್ನು ಬಂಧಿಸಿದೆ. ಮೋಟಾರ್ ಸೈಕಲ್​​ನಲ್ಲಿದ್ದ ಆರೋಪಿ ಹಿಂದಿನಿಂದ ಬಂದು ಆಕೆಯ ಬೆನ್ನಿಗೆ ಅನುಚಿತವಾಗಿ ಹೊಡೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

Chandigarh: Man held for molesting woman diplomat
ರಾಜತಾಂತ್ರಿಕ ಅಧಿಕಾರಿಗೆ ಕಿರುಕುಳ ಆರೋಪ: ಓರ್ವನ ಬಂಧನ

By

Published : Oct 9, 2021, 2:35 PM IST

ಚಂಡೀಗಢ,ಪಂಜಾಬ್ :ಚಂಡೀಗಢದಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 60 ವರ್ಷದ ಮಹಿಳಾ ರಾಜತಾಂತ್ರಿಕ ಅಧಿಕಾರಿಯೋರ್ವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಬೆಳಗ್ಗೆ 6.30ರ ಸುಮಾರಿಗೆ ಸೆಕ್ಟರ್-9ರಲ್ಲಿರುವ ಆಕೆಯ ನಿವಾಸದಿಂದ ಸೆಕ್ಟರ್ 10ರಲ್ಲಿರುವ ಚಂಡೀಗಢ ಲಾನ್ ಟೆನಿಸ್ ಅಸೋಸಿಯೇಶನ್ ಮೈದಾನದ ಕಡೆಗೆ ಹೋಗುತ್ತಿದ್ದಾಗ ಯುವಕ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ರಾಜತಾಂತ್ರಿಕ ಅಧಿಕಾರಿ ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹೌಸಿಂಗ್ ಬೋರ್ಡ್ ಲೈಟ್ ಪಾಯಿಂಟ್ ಬಳಿ ಆರೋಪಿಯನ್ನು ಬಂಧಿಸಿದೆ. ಮೋಟಾರ್ ಸೈಕಲ್​​ನಲ್ಲಿದ್ದ ಆರೋಪಿ ಹಿಂದಿನಿಂದ ಬಂದು ಆಕೆಯ ಬೆನ್ನಿಗೆ ಅನುಚಿತವಾಗಿ ಹೊಡೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಚಾರಣೆ ಕೈಗೊಂಡಿದ್ದ ಪೊಲೀಸರು ಇದೇ ರೀತಿಯ ಅಪರಾಧವನ್ನು ಆರೋಪಿ ಈ ಹಿಂದೆಯೂ ಮಾಡಿದ್ದನೆಂದು ತಿಳಿದು ಬಂದಿದೆ. ಸೆಕ್ಟರ್ 26 ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ: ಆತಂಕದಲ್ಲಿ ಕಾಶ್ಮೀರಿ ಪಂಡಿತರು

ABOUT THE AUTHOR

...view details