ಚಿಕ್ಕಮಗಳೂರು: ಕೊರೊನಾ ಲಾಕ್ಡೌನ್ ಸಮಯದಲ್ಲಿ ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಗೋ ಕಳ್ಳತನ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಎರಡು ತಿಂಗಳಲ್ಲಿ ಒಂದೇ ಮನೆಯಲ್ಲಿ ಎರಡು ಹಸುಗಳು ಕಳ್ಳತನವಾಗಿದೆ.
ಚಿಕ್ಕಮಗಳೂರಲ್ಲಿ ಹೆಚ್ಚುತ್ತಿದೆ ಗೋಕಳ್ಳತನ.. ಸಾಕಣೆದಾರರದಲ್ಲಿ ಆತಂಕ - Kodihalli from Moodigere Taluk, Chikkamagaluru District
ಸತೀಶ್ - ಜ್ಯೋತಿ ದಂಪತಿಗೆ ಸೇರಿದ ಹಸುಗಳನ್ನು ಖದೀಮರು ಕಳ್ಳತನ ಮಾಡಿದ್ದು, ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದ ಕುಟುಂಬ ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
cattle theft increase in chikmagalur
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂಡಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಸುಗಳನ್ನು ಕಳೆದುಕೊಂಡು ಮಹಿಳೆ ಕಣ್ಣೀರಿಡುವಂತಾಗಿದೆ.
ಸತೀಶ್ - ಜ್ಯೋತಿ ದಂಪತಿಗೆ ಸೇರಿದ ಹಸುಗಳು ಕಳ್ಳತನವಾಗಿದ್ದು, ಹಸುಗಳು ಕೊಡುವ ಹಾಲಿನಿಂದ ನಾವು ಜೀವನ ನಡೆಸುತ್ತಿದ್ದೆವು. 1 ಲಕ್ಷ ಹಣ ಕೊಟ್ಟು ಮನೆಗೆ ತಂದು 2 ಹಸುಗಳನ್ನು ಸಾಕುತ್ತಿದ್ದೆವು. ನಿತ್ಯ 20 ಲೀಟರ್ ಹಾಲನ್ನು ಈ ಹಸುಗಳು ನೀಡುತ್ತಿದ್ದವು ಎಂದು ಜ್ಯೋತಿ ಕಣ್ಣೀರಿಡುತ್ತಿದ್ದಾರೆ.
Last Updated : Jun 4, 2021, 9:23 PM IST