ಕರ್ನಾಟಕ

karnataka

ETV Bharat / crime

ಶಂಕರ್ ಕುಟುಂಬ ಆತ್ಮಹತ್ಯೆ ಪ್ರಕರಣ: ಹಸಿವಿನಿಂದ ಮಗು ಮೃತಪಟ್ಟಿಲ್ಲ ಕೊಲೆ ಎಂದು ಎಫ್‌ಎಸ್‌ಎಲ್ ವರದಿ

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣದ 400 ಪುಟಗಳ ವರದಿಯನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದು, ಅದರಲ್ಲಿ ಮಗು ಹಸಿವಿನಿಂದ ಮೃತಪಟ್ಟಿಲ್ಲ ಬದಲಾಗಿ ಕೊಲೆ ಮಾಡಲಾಗಿದೆ ಎಂದು ಎಫ್ಎಸ್‌ಎಲ್‌ ವರದಿಯನ್ನು ಉಲ್ಲೇಖಿಸಲಾಗಿದೆ.

Byadarahalli shankar family suicide case; baby murdered says FSL report
ಶಂಕರ್ ಕುಟುಂಬ ಆತ್ಮಹತ್ಯೆ ಪ್ರಕರಣ: ಹಸಿವಿನಿಂದ ಮಗು ಮೃತಪಟ್ಟಿಲ್ಲ ಕೊಲೆ ಎಂದು ಎಫ್‌ಎಸ್‌ಎಲ್ ವರದಿ

By

Published : Dec 13, 2021, 7:21 PM IST

ಬೆಂಗಳೂರು: ನಗರದ ಬ್ಯಾಡರಹಳ್ಳಿ ಪ್ರಕರಣದಲ್ಲಿ ಮಗು ಹಸಿವಿನಿಂದ ಸತ್ತಿಲ್ಲ, ಬದಲಾಗಿ ಕೊಲೆ ಮಾಡಲಾಗಿದೆ ಎಂದು ವೈದ್ಯಕೀಯ ಪರೀಕ್ಷೆಯ ವರದಿಯಿಂದ ತಿಳಿದು ಬಂದಿದೆ.

ಕೌಟುಂಬಿಕ ಕಲಹದಿಂದ ಶಂಕರ್ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದಲ್ಲಿ ಪುಟ್ಟ ಮಗು ಕೂಡ ಸಾವನ್ನಪ್ಪಿತ್ತು. ಮಗು ಸಾವನ್ನಪ್ಪಿದ್ದರ ಬಗ್ಗೆ ಅನುಮಾನ ಬಂದ ಕಾರಣ, ಮಗುವಿನ ಸಾವಿನ ತನಿಖೆಗೆ ಪೊಲೀಸರು ಎಫ್‌ಎಸ್‌ಐಎಲ್ ಪರೀಕ್ಷೆಗಾಗಿ ಕಳುಹಿಸಿ ಕೊಟ್ಟಿದ್ದರು.

ಇತ್ತೀಚೆಗೆ ಎಫ್‌ಎಸ್‌ಎಲ್ ವರದಿ ಪೊಲೀಸರ ಕೈಸೇರಿದ್ದು, ಮಗು ಸಾವನ್ನಪ್ಪಿರುವುದು ಹಸಿವಿನಿಂದ ಅಲ್ಲ. ಬದಲಾಗಿ ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಪೊಲೀಸರು ಕೋರ್ಟ್‌ಗೆ 400 ಪುಟಗಳ ವರದಿ ಸಲ್ಲಿಸಿದ್ದು, ಅದರಲ್ಲಿ ಮಗುವಿನ ಸಾವಿನ ಅಂಶವನ್ನು ಸೇರಿಸಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಶಂಕರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

ABOUT THE AUTHOR

...view details