ಕರ್ನಾಟಕ

karnataka

ETV Bharat / crime

ಕೊಳ್ಳೇಗಾಲ: ಮದುವೆ ಮುಗಿಸಿ ತೆರಳುತ್ತಿದ್ದವರಿಗೆ ಬಸ್ ಡಿಕ್ಕಿ, ಮೂವರಿಗೆ ಗಾಯ - ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಪಟ್ಟಣದಲ್ಲಿ ಮದುವೆ ಮುಗಿಸಿಕೊಂಡು ಬೈಕ್ ನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿರುವಾಗ ತಾಲೂಕಿನ ಮಧುವನಹಳ್ಳಿ ಬಳಿ ಎದುರು ಬಂದ ಖಾಸಗಿ ಬಸ್​​ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ.

bus-and-bike-accident-in-kollegala-news
ಮದುವೆ ಮುಗಿಸಿ ತೆರಳುತ್ತಿದ್ದವರಿಗೆ ಬಸ್ ಡಿಕ್ಕಿ

By

Published : Feb 4, 2021, 9:28 PM IST

ಕೊಳ್ಳೇಗಾಲ:ಮದುವೆ ಮುಗಿಸಿ ಬೈಕ್​ನಲ್ಲಿ ಹೋಗುತ್ತಿದ್ದವರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿರುವ ಘಟನೆ ಮಧುವನಹಳ್ಳಿ ಗ್ರಾಮದ ಬಳಿ ಜರುಗಿದೆ.

ಮದುವೆ ಮುಗಿಸಿ ತೆರಳುತ್ತಿದ್ದವರಿಗೆ ಬಸ್ ಡಿಕ್ಕಿ

ಓದಿ: ಬೆಂಗಳೂರಿಗೆ ರಾಷ್ಟ್ರಪತಿ ಆಗಮನ: ರಾಜ್ಯಪಾಲ, ಸಿಎಂರಿಂದ ಸ್ವಾಗತ

ಹನೂರು ತಾಲೂಕಿನ ಚಿಕ್ಕಮಾಲಾಪುರ ಗ್ರಾಮದ ಮೂರ್ತಿ (50), ಸವಿತಾ (30) ಹಾಗೂ 9 ವರ್ಷದ ಬಾಲಕ ಶಿವು ಗಾಯಗೊಂಡಿರುವ ಬೈಕ್ ಸವಾರರು. ಇವರು ಪಟ್ಟಣದಲ್ಲಿ ಮದುವೆ ಮುಗಿಸಿಕೊಂಡು ಬೈಕ್ ನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿರುವಾಗ ತಾಲೂಕಿನ ಮಧುವನಹಳ್ಳಿ ಬಳಿ ಎದುರು ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಗಾಯಾಳುಗಳನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೂರ್ತಿ ‌ಹಾಗೂ ಸವಿತಾ ಎಂಬುವರಿಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details