ತಿರುಚ್ಚಿ(ತಮಿಳುನಾಡು): ಇಲ್ಲಿನ ತಿರುವೆರುಪುರ್ನ ಕತ್ತೂರ್ನಲ್ಲಿರುವ ಅದಿತ್ ದ್ರಾವಿಡರ ಕಲ್ಯಾಣ ಬಾಲಕಿಯರ ಪ್ರೌಢಶಾಲೆಯ ಶೌಚಾಲಯದಲ್ಲಿ ಶೌಚಾಲಯದಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಶಾಲಾ ಶೌಚಾಲಯದಲ್ಲಿ ಗಂಡು ಮಗುವಿನ ಶವ ಪತ್ತೆಯಾಗಿದ್ದು, ಶಿಶು ಜನಿಸಿ ಒಂದು ಗಂಟೆಯಾಗಿರಬಹುದು ಎನ್ನಲಾಗ್ತಿದೆ.
ಮಗುವಿನ ಮೃತದೇಹವನ್ನು ಮಹಾತ್ಮಕ ಗಾಂಧಿ ಮೆಮೋರಿಯಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಮೃತದೇಹ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲಾ ಕಟ್ಟಡದ ಆವರಣದ ಶೌಚಾಲಯದಲ್ಲಿ ಮಗು ಹುಟ್ಟಿದೆಯಾ ಅಥವಾ ಬೇರೆ ಯಾರಾದರೂ ಮಗುವನ್ನು ತಂದು ಶಾಲೆಯ ಶೌಚಾಲಯದಲ್ಲಿ ಎಸೆದು ಹೋಗಿದ್ದಾರಾ ಎಂಬುದರ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.