ಮೈಸೂರು:ಇಬ್ಬರು ಬೈಕ್ ಕಳ್ಳರನ್ನ ಬಂಧಿಸಿ, ಬಂಧಿತರಿಂದ 3.90 ಲಕ್ಷ ರೂ.ಮೌಲ್ಯದ 8 ಬೈಕ್ಗಳನ್ನು ನಂಜನಗೂಡು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಬೈಕ್ ಕಳ್ಳರ ಬಂಧನ: 8 ಬೈಕ್ ವಶ - 8 ಬೈಕ್ ವಶ
ಮೈಸೂರಿನ ವಿವಿಧ ಸ್ಥಳಗಳಲ್ಲಿ ಬೈಕ್ಗಳನ್ನು ಕದ್ದಿದ್ದ ಇಬ್ಬರು ಚಾಲಾಕಿ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಇಬ್ಬರು ಕಳ್ಳರಿಂದ ಎಂಟು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
![ಇಬ್ಬರು ಬೈಕ್ ಕಳ್ಳರ ಬಂಧನ: 8 ಬೈಕ್ ವಶ mysore](https://etvbharatimages.akamaized.net/etvbharat/prod-images/768-512-09:44:08:1619540048-kn-mys-05-thieves-vis-ka10003-27042021211922-2704f-1619538562-30.jpg)
ನಂಜನಗೂಡಿನ ನೀಲಕಂಠನಗರದ ಶಿವಪ್ರಸಾದ್ ನಂಜನಗೂಡಿನ ತ್ಯಾಗರಾಜ ಕಾಲೋನಿಯ ಶಶಾಂಕ ಬಂಧಿತ ಆರೋಪಿಗಳು. ನಂಜನಗೂಡು ಮೈಸೂರು ಮುಖ್ಯರಸ್ತೆಯ ಕತ್ವಾಡಿಪುರ ಗೇಟ್ ಬಳಿ ಪೊಲೀಸರು ತಪಾಸಣೆ ಮಾಡುತ್ತಿದ್ದಾಗ, ನಂಬರ್ ಪ್ಲೇಟ್ ಇಲ್ಲದೇ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಸ್ಕೂಟರ್ ಮೇಲೆ ಬರುತ್ತಿದ್ದ ಇವರಿಬ್ಬರನ್ನ ತಡೆದು ನಿಲ್ಲಿಸಿ, ದಾಖಲೆಗಳನ್ನು ಪರಿಶೀಲನೆ ಮಾಡಲಾಗಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಮೋಟರ್ ಸೈಕಲ್, ಕೆ.ಆರ್. ನಗರ ಠಾಣೆ ವ್ಯಾಪ್ತಿಯಲ್ಲಿ 1 ಬಜಾಜ್ ಪಲ್ಸರ್, ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಯಮಹ ಬೈಕ್, ಜಯಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್,ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಬೈಕ್, ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಬೈಕ್, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನ ಮಾಡಿರುವುದಾಗಿ ಚಾಲಾಕಿಗಳು ಒಪ್ಪಿಕೊಂಡಿದ್ದಾರೆ.ಆರೋಪಿಗಳನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ.