ಕರ್ನಾಟಕ

karnataka

ETV Bharat / crime

ಭೋಪಾಲ್​ನ ಆಸ್ಪತ್ರೆಯಿಂದ 800 ರೆಮ್​​ಡೆಸಿವಿರ್ ಚುಚ್ಚುಮದ್ದು ಕಳವು - ಮಧ್ಯಪ್ರದೇಶದ ಭೋಪಾಲ್​ನ ಹಮಿದಿಯಾ ಆಸ್ಪತ್ರೆ

ಮಧ್ಯಪ್ರದೇಶದ ಭೋಪಾಲ್​ನ ಹಮಿದಿಯಾ ಆಸ್ಪತ್ರೆಯಲ್ಲಿ 800 ರೆಮ್​​ಡೆಸಿವಿರ್ ಇಂಜೆಕ್ಷನ್​ ಕಳ್ಳತನವಾಗಿದ್ದು, ಪೊಲೀಸರು ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Remdesivir
ರೆಮ್​​ಡೆಸಿವಿರ್

By

Published : Apr 18, 2021, 11:46 AM IST

ಭೋಪಾಲ್ (ಮಧ್ಯಪ್ರದೇಶ): ಭೋಪಾಲ್​ನ ಹಮಿದಿಯಾ ಆಸ್ಪತ್ರೆಯಿಂದ 800 ರೆಮ್​​ಡೆಸಿವಿರ್ ಚುಚ್ಚುಮದ್ದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೊಹೆಫಿಜಾ ಠಾಣಾ ಪೊಲೀಸರು ಆಸ್ಪತ್ರೆಗೆ ಬಂದು ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯೇ ಕಳ್ಳತನ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಕೊರೊನಾ ಅಟ್ಟಹಾಸ: ಒಂದೇ ದಿನ 1,501 ಮಂದಿ ಸಾವು.. 2.61 ಲಕ್ಷ ಕೇಸ್​ ಪತ್ತೆ!

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ಪಿ ಸಿ ಶರ್ಮಾ, ಹಮಿದಿಯಾ ಆಸ್ಪತ್ರೆ ಹಾಗೂ ಭೋಪಾಲ್ ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಳಸಂತೆಯಲ್ಲಿ ರೆಮ್​​ಡೆಸಿವಿರ್ ಮಾರಾಟವಾಗುತ್ತಿರುವ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇಂದೋರ್​ನಲ್ಲಿ ಕಾಳಸಂತೆಯಲ್ಲಿ ರೆಮ್​​ಡೆಸಿವಿರ್ ಮಾರುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ಈತ ಕುಟುಂಬವೊಂದಕ್ಕೆ 22,000 ರೂ.ಗಳಿಗೆ ರೆಮ್​​ಡೆಸಿವಿರ್ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ABOUT THE AUTHOR

...view details