ಮುಂಬೈ(ಮಹಾರಾಷ್ಟ್ರ): ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಗಾಯೆಗೂಂಡಿರುವ ಘಟನೆ ಮುಂಬೈನ ದಾದರ್ ಟಿಟಿ ಪ್ರದೇಶದಲ್ಲಿ ನಡೆದಿದೆ. ಗಾಯಗೊಂಡವರ ಪೈಕಿ ಬಸ್ ಚಾಲಕ ಹಾಗೂ ನಿರ್ವಾಹಕ ಸೇರಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ: ಚಾಲಕನ ನಿಯಂತ್ರಣ ತಪ್ಪಿ 'ಬೆಸ್ಟ್' ಬಸ್ ಟಿಪ್ಪರ್‌ಗೆ ಡಿಕ್ಕಿ; 8 ಮಂದಿಗೆ ಗಾಯ - ಟಿಪ್ಪರ್‌ಗೆ ಡಿಕ್ಕಿ ಹೊಡೆದ ಬೆಸ್ಟ್ ಬಸ್
ಸದ್ಯ ಗಾಯಾಗಳುಗಳನ್ನು ಸಮೀಪದ ಸಿಯಾನ್ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ನಜ್ಜು-ಗುಜ್ಜಾಗಿದ್ದು, ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ..

ಸದ್ಯ ಗಾಯಾಗಳುಗಳನ್ನು ಸಮೀಪದ ಸಿಯಾನ್ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ನಜ್ಜು-ಗುಜ್ಜಾಗಿದ್ದು, ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಸ್ಟ್‌ನ ಬಸ್ ಮಾರ್ಗ ಸಂಖ್ಯೆ 22ರಲ್ಲಿ ಮರೋಲ್ ಮೊರೋಶಿಯಿಂದ ಪೈಧುನಿಗೆ ಚಲಿಸುತ್ತಿದಾಗ ದುರಂತ ಸಂಭವಿಸಿದೆ. 53 ವರ್ಷದ ಚಾಲಕ ರಾಜೇಂದ್ರ, ನಿರ್ವಾಹಕ ಕಾಶಿರಾಮ್ ಧುರಿ(57), ವಲಸಿಗರಾದ ತಾಹಿರ್ ಹುಸೇನ್, ರೂಪಾಲಿ ಗಾಯಕ್ವಾಡ್, ಸುಲ್ತಾನ್ ಸ್ಥಿತಿ ಗಂಭೀರವಾಗಿದೆ. ಮನ್ಸೂರ್ ಅಲಿ, ಶ್ರಾವಣಿ ಮ್ಹಾಸ್ಕೆ, ವೈದೇಹಿ ಬಾಮ್ನೆ ಅವರಿಗೆ ಸಣ್ಣ ಪುಟ್ಟ ಗಾಯಗಳಾವೆ ಎಂದು ಪಾಲಿಕೆಯ ತುರ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.