ಯಲಹಂಕ(ಬೆಂಗಳೂರು) :ಗ್ಯಾಸ್ ಕಂಪನಿಯ ಪೈಪ್ಲೈನ್ ಅಗೆಯಲು ಅನುಮತಿ ನೀಡುವ ವಿಚಾರಕ್ಕೆ 20 ಸಾವಿರ ಲಂಚ ಕೇಳಿದ ಆರೋಪದಲ್ಲಿ ಚಿಕ್ಕಜಾಲ ಟ್ರಾಫಿಕ್ ಇನ್ಸ್ಪೆಕ್ಟರ್ ಹಂಸವೇಣಿ ಎಸಿಬಿ ಅಧಿಕಾರಿಗಳಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಕೇಂದ್ರ ಸರ್ಕಾರದ ಗೇಲ್ ಗ್ಯಾಸ್ ಕಂಪನಿಯ ಪೈಪ್ಲೈನ್ ಅಗೆಯುವ ವಿಚಾರಕ್ಕೆ ಅನುಮತಿ ನೀಡಲು ಚಿಕ್ಕಜಾಲ ಟ್ರಾಫಿಕ್ ಇನ್ಸ್ಪೆಕ್ಟರ್ ಹಂಸವೇಣಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಪೈಪ್ಲೈನ್ನವರು ಎಸಿಬಿಗೆ ದೂರು ನೀಡಿದ್ದರು.
20 ಸಾವಿರ ಲಂಚ ಪಡೆಯುವಾಗ ರೆಡ್ಹ್ಯಾಂಡಾಗಿ ಸಿಕ್ಕಿ ಬಿದ್ದ ಟ್ರಾಫಿಕ್ ಇನ್ಸ್ಪೆಕ್ಟರ್
20 ಸಾವಿರ ರೂಪಾಯಿ ಲಂಚ ಕೇಳಿದ ಆರೋಪದಲ್ಲಿ ಚಿಕ್ಕಜಾಲ ಟ್ರಾಫಿಕ್ ಇನ್ಸ್ಪೆಕ್ಟರ್ ಹಂಸವೇಣಿ ಎಸಿಬಿ ಅಧಿಕಾರಿಗಳಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದು, ಕೇಂದ್ರ ಸರ್ಕಾರದ ಗೇಲ್ ಗ್ಯಾಸ್ ಕಂಪನಿಯವರು ಎಸಿಬಿಗೆ ದೂರು ನೀಡಿದ್ದರು.
20 ಸಾವಿರ ಲಂಚ ಪಡೆಯುವಾಗ ರೆಡ್ಹ್ಯಾಂಡಾಗಿ ಸಿಕ್ಕಿ ಬಿದ್ದ ಟ್ರಾಫಿಕ್ ಇನ್ಸ್ಪೆಕ್ಟರ್
ಈ ಹಿನ್ನೆಲೆಯಲ್ಲಿ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಹಣದ ಸಮೇತ ಇನ್ಸ್ಪೆಕ್ಟರ್ ಹಂಸವೇಣಿ ಸಿಕ್ಕಿಬಿದ್ದಾರೆ. ಕಳೆದ ವರ್ಷದ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಹಂಸವೇಣಿ, ಕಳೆದ ಕೆಲವು ದಿನಗಳಿಂದ ರಸ್ತೆ ಅಗೆಯಲು ಅನುಮತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಕಲಬುರಗಿ ಭೂಸ್ವಾಧೀನ ಕಚೇರಿ ಮೇಲೆ ಎಸಿಬಿ ದಾಳಿ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯವಸ್ಥಾಪಕ