ಅಹಮದಾಬಾದ್(ಗುಜರಾತ್):ಬ್ಯಾಂಕ್ ನೌಕರನೊಬ್ಬ ತಾನು ಕೆಲಸ ಮಾಡುವ ಬ್ಯಾಂಕಿನಲ್ಲೇ ಲೂಟಿ ಮಾಡಿದ ಘಟನೆ ಜರುಗಿದೆ. ಬ್ಯಾಂಕ್ ಗುತ್ತಿಗೆ ಆಧಾರದ ಸಿಬ್ಬಂದಿಯೋರ್ವ ತನ್ನ ಪತ್ನಿಯ ಜೊತೆಗೂಡಿ ಬ್ಯಾಂಕಿನ ಲಾಕರ್ ಒಡೆದು ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾನೆ.
ಅನುಮಾನದ ಮೇಲೆ ಪೊಲೀಸರು ಯುವಕನೊಬ್ಬನನ್ನು ವಿಚಾರಣೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಯುವಕನೊಬ್ಬನನ್ನು ತಡೆದು ವಿಚಾರಿಸಿದಾಗ ಆತನ ಬಳಿ ಚಿನ್ನಾಭರಣ ತುಂಬಿದ್ದ ಬ್ಯಾಗ್ ಸಿಕ್ಕಿದೆ. ಇದೇ ವೇಳೆ ಬ್ಯಾಂಕ್ ಲಾಕರ್ನಲ್ಲಿ ಕಳ್ಳತನ ನಡೆದಿರುವುದು ಬಯಲಾಗಿದೆ. ಎಲ್ಲಿಸ್‌ಬ್ರಿಡ್ಜ್ ಪೊಲೀಸ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ದಂಪತಿ. ಬ್ಯಾಂಕ್ ಲಾಕರ್‌ನಿಂದ 47.88 ಲಕ್ಷ ಮೌಲ್ಯದ ಮೌಲ್ಯದ ವಸ್ತುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಳ್ಳತನಕ್ಕೆ ಯೋಜಿಸಿದ್ದ ಈ ದಂಪತಿ ಪಕ್ಕಾ ಪ್ಲಾನ್ ಮಾಡಿಯೇ ಕಳ್ಳತನದ ಕೃತ್ಯ ಎಸಗಿರುವುದು ತಿಳಿದು ಬಂದಿದೆ.