ಬಳ್ಳಾರಿ:ನಗರದ ಹೊರವಲಯದ ವಿನಾಯಕ ನಗರದ ಗಣೇಶ ದೇವಸ್ಥಾನದ ಹತ್ತಿರ ಯುವಕನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ.
ಮೃತ ಯುವಕ ಅಲ್ಲಿಪುರ ನಿವಾಸಿ ಆಟೋ ಚಾಲಕ ಎಂದು ತಿಳಿದುಬಂದಿದೆ. ಕೊಲೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸ್ನೇಹಿತರು ಕುಡಿದ ಅಮಲಿನಲ್ಲಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀರು ಆರೋಪಿಸಿದ್ದಾರೆ.