ವಿಜಯವಾಡ( ಆಂಧ್ರಪ್ರದೇಶ): ಕುಡಿದ ಮತ್ತಿನಲ್ಲಿ ಕೆಲವರಿಗೆ ತಮ್ಮ ಮಕ್ಕಳು ಯಾರು ಎಂಬುದು ಸಹ ಜ್ಞಾನವಿರುವುದಿಲ್ಲ. ಇಂಥ ರಾಕ್ಷಸರೇ ತಮಗೆ ಹುಟ್ಟಿದ ಮಕ್ಕಳ ಮೇಲೆಯೇ ಅತ್ಯಾಚಾರವೆಸಗಲು ಮುಂದಾಗುತ್ತಾರೆ. ಇಂಥವೇ ಎರಡು ಘಟನೆಗಳು ಪಶ್ಚಿಮ ಕೃಷ್ಣಾ ಜಿಲ್ಲೆಯಲ್ಲಿ ಕಳೆದ ದಿನ ನಡೆದ ಬಗ್ಗೆ ವರದಿಯಾಗಿವೆ. ಒಂದು ಪ್ರಕರಣದಲ್ಲಿ ಮಲತಂದೆಯೊಬ್ಬ ತನ್ನ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದರೆ, ಮತ್ತೊಂದು ಪ್ರಕರಣದಲ್ಲಿ ತಂದೆಯ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೀಡಾಗಿದ್ದಾರೆ.
ಘಟನೆಗಳ ವಿವರ: ಚಂದರಲಪಾಡು ಮಂಡಲದ ಕೋಣಯಪಾಳೆಮ್ ನಲ್ಲಿ ವಿವಾಹಿತ ಮಹಿಳೆಯೊಬ್ಬರಿಗೆ ಇಬ್ಬರು ಹೆಣ್ಣು ಮಕ್ಕಳು. ಅನಾರೋಗ್ಯದಿಂದ ಗಂಡ ತೀರಿಕೊಂಡಾಗ ಅವರು ಕೃಷ್ಣಾ ಜಿಲ್ಲೆಯ ಕಂಕಿಪಾಡು ಪ್ರದೇಶದ ಬತ್ತಿನಾ ಕೊಂಡಾಲ ಎಂಬಾತನೊಂದಿಗೆ ಮತ್ತೊಮ್ಮೆ ಮದುವೆಯಾಗಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳು ಕೋಣಪಾಳೆಯಮ್ನಲ್ಲಿ ಅಜ್ಜಿ ಮನೆಯಲ್ಲಿ ಬೆಳೆಯುತ್ತಿದ್ದಾರೆ.
ಗಂಡ ಹೆಂಡತಿ ಇಬ್ಬರೂ ಕೂಲಿ ಕೆಲಸಕ್ಕಾಗಿ ಪಾಲ್ಮೇರು ಹತ್ತಿರದ ವೆಲ್ಪುಲಾ ಗ್ರಾಮಕ್ಕೆ ಬಂದಿದ್ದರು. ಆದರೆ ಜುಲೈ 27 ರಂದು ಪತಿ ಕೊಂಡಾಲು ಹೆಂಡತಿಗೆ ಹೇಳದೇ ಕೋಣಪಾಳೆಯಮ್ಗೆ ಬಂದು ಹಿರಿಯ ಮಗಳಿಗೆ ನಿದ್ರೆ ಮಾತ್ರೆ ನೀಡಿ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಿರಿಯ ಮಗಳು ಕಿರುಚಿಕೊಂಡಾಗ ನೆರೆಹೊರೆಯವರು ಜಮಾಯಿಸಿದ ನಂತರ ಕೊಂಡಾಲು ಓಡಿ ಹೋಗಿದ್ದಾನೆ.