ಪೂರ್ಣಿಯಾ (ಬಿಹಾರ) : ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಎರಡು ಅಮಾನವೀಯ ಮತ್ತು ಹೇಯ ಕೃತ್ಯಗಳು ಮಹಿಳೆಯರ ಮೇಲೆ ನಡೆದಿವೆ. ಪಶ್ಚಿಮ ಬಂಗಳಾದ ಡಾರ್ಜಿಲಿಂಗ್ ಮೂಲದ 35 ವರ್ಷದ ಮಹಿಳೆಯ ಮೇಲೆ ಚಲಿಸುತ್ತಿದ್ದ ಪೂರ್ಣಿಯಾ ಜಿಲ್ಲೆಯಲ್ಲಿ ಬಸ್ನಲ್ಲಿ ಐವರು ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ಬಸ್ನಿಂದ ಮಹಿಳೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಪೂರ್ಣಿಯ ಎಂಬಲ್ಲಿ ನಡೆದಿದೆ. ಸದ್ಯ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದ್ದು, ಪೂರ್ಣಿಯಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಐವರು ಆರೋಪಿಗಳು ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ಕಣ್ಣು ಮುಚ್ಚಿ ಕುಳಿತ್ತಿದ್ದಳು ಎಂದು ಸಂತ್ರಸ್ತೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ''ನಾನು ಬಸ್ ಹತ್ತಿದಾಗ ತುಂಬ ಜನ ಪ್ರಯಾಣಿಕರಿದ್ದರು, ಆದರೆ ಸಮಯ ಕಳೆದಂತೆ ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಯಿತು, ಸ್ವಲ್ಪ ದೂರ ಪ್ರಯಾಣಿಸಿದ ಬಳಿಕ ಇಡೀ ಬಸ್ನಲ್ಲಿ ಬೇರೆ ಯಾರು ಪ್ರಯಾಣಿಕರು ಇರಲಿಲ್ಲ ಕೇವಲ ನಾನು ಮತ್ತು ಆ ಐವರು ಪುರುಷರು, ಮೊದಲಿಗೆ ನನ್ನನ್ನು ಕೆಟ್ಟ ದೃಷ್ಠಿಯಿಂದ ನೋಡಿದರು, ನಂತರ ಅಶ್ಲೀಲ ಸನ್ನೆಗಳನ್ನು ಮಾಡಲು ಪ್ರಾರಂಭಿಸಿದರು, ಆ ಐವರು ಜನ ಹತ್ತಿರ ಬಂದು ನನ್ನನ್ನು ಸುತ್ತುವರೆದು ಅತ್ಯಾಚಾರ ಮಾಡಲು ಯತ್ನಿಸಿದರು. ಚಾಲಕ ಮತ್ತು ಕಂಡಕ್ಟರ್ಗೆ ಸಹಾಯ ಮಾಡಿ ಎಂದು ಕೇಳಿಕೊಂಡರು ಅವರು ನನ್ನ ಕಡೆ ಗಮನ ಹರಿಸಲಿಲ್ಲ ಮತ್ತು ಸಹಾಯಕ್ಕೂ ಬರಲಿಲ್ಲ'' ಎಂದು ಸಂತ್ರಸ್ತೆ ಹೇಳಿದ್ದಾರೆ.
ಇದನ್ನೂ ಓದಿ :ಅತಿ ವೇಗದಿಂದ ಬಂದ ಟಿಪ್ಪರ್, ರಸ್ತೆ ಪಕ್ಕದಲ್ಲಿ ಮೇಯುತ್ತಿದ್ದ 30ಕುರಿಗಳು ಸಾವು