ಲಖನೌ (ಉತ್ತರ ಪ್ರದೇಶ): 4,300 ಕೋಟಿ ರೂ. ಮೊತ್ತದ ಬೈಕ್ ಬೋಟ್ ಹಗರಣ ಸಂಬಂಧ ಇದೀಗ ಮೀರತ್ನಲ್ಲಿರುವ ಇನ್ನೋರ್ವ ಪ್ರಮುಖ ಆರೋಪಿ ವಿಶಾಲ್ ಕುಮಾರ್ನ 3 ಕೋಟಿ ರೂ. ಆಸ್ತಿಗೆ ಲಖನೌ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.
ಹಗರಣದಡಿ ಈಗಾಗಲೇ ವಿಶಾಲ್ ಕುಮಾರ್ ಅರೆಸ್ಟ್ ಆಗಿದ್ದು, ಇವರ ಪತ್ನಿಗೆ ನೋಟಿಸ್ ನೀಡಿ ಆಸ್ತಿಗೆ ಮುಟ್ಟುಗೋಲು ಹಾಕಲಾಗಿದೆ. ಈ ಆಸ್ತಿಯನ್ನು ಶೀಘ್ರದಲ್ಲೇ ಹರಾಜು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಏನಿದು ಬೈಕ್ ಬೋಟ್ ಹಗರಣ?
2018 ರಲ್ಲಿ ನೋಯ್ಡಾ ಮೂಲದ ಗಾರ್ವಿಟ್ ಇನ್ನೋವೇಟಿವ್ ಪ್ರಮೋಟರ್ಸ್ ಲಿಮಿಟೆಡ್ ಎಂಬ ಕಂಪನಿಯು 'ಬೈಕ್ ಬೋಟ್' ಎಂಬ ಮಾರ್ಕೆಟಿಂಗ್ ಯೋಜನೆಯನ್ನು ಹೊರತಂದಿತು. ಒಂದು ವರ್ಷದಲ್ಲಿ ದ್ವಿಗುಣ ಆದಾಯದ ಭರವಸೆಯೊಂದಿಗೆ ಹೂಡಿಕೆದಾರರಿಗೆ ಆಮಿಷ ಒಡ್ಡಿತ್ತು. ಆದರೆ ಯಾವುದೇ ಸರಿಯಾದ ಒಪ್ಪಂದ ಅಥವಾ ದಾಖಲೆಗಳಿಲ್ಲದೆ, ಸುಮಾರು 2.25 ಲಕ್ಷ ಬೈಕ್ ಬೋಟ್ ಹೂಡಿಕೆದಾರರಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿರುವುದು ಬಹಿರಂಗವಾಗಿದೆ.
ಇದನ್ನೂ ಓದಿ:2ನೇ ಕೋವಿಡ್ ಅಲೆಯಲ್ಲಿ ಭಾರತ: ಮೊಟ್ಟ ಮೊದಲ ಬಾರಿಗೆ ಒಂದೇ ದಿನ 1 ಲಕ್ಷ ಕೇಸ್ ದಾಖಲು!
ಈ ಪ್ರಕರಣವನ್ನು ಆರ್ಥಿಕ ವಂಚನೆ ಪತ್ತೆ ದಳ ಭೇದಿಸುತ್ತಿದ್ದು, ಪ್ರಮುಖ ಆರೋಪಿ ಬದ್ರಿ ನಾರಾಯಣ್ ತಿವಾರಿಯನ್ನು ಫೆಬ್ರವರಿಯಲ್ಲಿ ಉತ್ತರ ಪ್ರದೇಶ ವಿಶೇಷ ಪೊಲೀಸ್ ಕಾರ್ಯಪಡೆ ಬಂಧಿಸಿ, ಆರ್ಥಿಕ ವಂಚನೆ ಪತ್ತೆ ದಳಕ್ಕೆ ಆತನನ್ನು ಹಸ್ತಾಂತರಿಸಿತ್ತು. ಬಳಿಕ ಆತನಿಂದ ಲಕ್ಷ, ಕೋಟ್ಯಾಂತರ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈವರೆಗೆ ಈ ಹಗರಣದಡಿ ಅನೇಕ ಪ್ರಕರಣಗಳು ದಾಖಲಾಗಿದ್ದು, 10ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಡಿಸೆಂಬರ್ವರೆಗೆ 3,500 ಕೋಟಿ ರೂ. ಹಣ ವಂಚಿಸಿರುವುದು ಬೆಳಕಿಗೆ ಬಂದಿದ್ದು ಇದೀಗ ಈ ಹಣ 4,300 ರೂ. ಎಂಬುದು ಬೆಳಖಿಗೆ ಬಂದಿದೆ. ಇನ್ನೂ ತನಿಖೆ ಮುಂದುವರೆದಿದೆ.