ಕರ್ನಾಟಕ

karnataka

ETV Bharat / crime

ಪ್ರಕರಣ ದಾಖಲಾದ 24 ಗಂಟೆಯಲ್ಲಿ ಕಳ್ಳನ ಬಂಧನ, ಕದ್ದ ವಸ್ತು ವಶ - ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಪಿಐ ದೌಲತ್ ಎನ್.ಕೆ. ನೇತೃತ್ವದಲ್ಲಿ ಕೆಂಭಾವಿ ಕ್ರೈಂ ಪಿಎಸ್ಐ ಹನುಮಂತಪ್ಪ ಮುಂಡರಗಿ ತನಿಖೆ ನಡೆಸಿ ನಿನ್ನೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಮುದನೂರು ಕೆ. ಗ್ರಾಮದ ಮಲ್ಕಪ್ಪ ಹೆಳವರ ಎಂಬುವನನ್ನು ಬಂಧಿಸಿ ವಿಚಾರಣೆ ನಡೆಸಿದರು.

Arrest thief and theft of stolen goods within 24 hours
ಪ್ರಕರಣ ದಾಖಲಾದ 24 ಗಂಟೆಯಲ್ಲಿ ಕಳ್ಳನ ಬಂಧನ

By

Published : Feb 13, 2021, 10:55 PM IST

ಸುರಪುರ:ಕಳ್ಳತನ ಪ್ರಕರಣ ದಾಖಲಾದ 24 ಗಂಟೆಯಲ್ಲಿ ಕಳ್ಳನನ್ನು ಬಂಧಿ‌ಸಿ ಕದ್ದ ವಸ್ತುವನ್ನ ಕೆಂಭಾವಿ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಓದಿ: ರಾಜ್ಯದಲ್ಲಿಂದು 419 ಮಂದಿಗೆ ಕೊರೊನಾ ದೃಢ: 4 ಸೋಂಕಿತರು ಬಲಿ

ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯ ಸಾಯಿನಗರ ಕ್ಯಾನ್ ಬಡಾವಣೆಯ ಸೀಮಂತರದ ಹೊಲದಲ್ಲಿ ನೀರು ಎತ್ತುವ ಮೋಟಾರ್ ಕಳ್ಳತನ ಪ್ರಕರಣವೊಂದು ನಡೆದಿತ್ತು. 13000 ರೂ. ಮೌಲ್ಯದ 2 ಎಚ್​​ಪಿ ಮೋಟರ್ ಅನ್ನು ಕಳವು ಮಾಡಲಾಗಿತ್ತು. ಘಟನೆ ಕುರಿತು ನಿನ್ನೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಪಿಐ ದೌಲತ್ ಎನ್.ಕೆ. ನೇತೃತ್ವದಲ್ಲಿ ಕೆಂಭಾವಿ ಕ್ರೈಂ ಪಿಎಸ್ಐ ಹನುಮಂತಪ್ಪ ಮುಂಡರಗಿ ತನಿಖೆ ನಡೆಸಿ ನಿನ್ನೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಮುದನೂರು ಕೆ. ಗ್ರಾಮದ ಮಲ್ಕಪ್ಪ ಹೆಳವರ ಎಂಬುವನನ್ನು ಬಂಧಿಸಿ ವಿಚಾರಣೆ ನಡೆಸಿದರು.

ಆರೋಪಿ ಮಲ್ಕಪ್ಪ ಹೆಳವರ ತಾನೇ ಹೊಲದಲ್ಲಿ ನೀರು ಎತ್ತುವ ಮೋಟಾರ್ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ನಂತರ ಪೊಲೀಸರು 13 ಸಾವಿರ ಮೌಲ್ಯದ 2 ಹೆಚ್​ಪಿ ನೀರು ಎತ್ತುವ ಮೋಟಾರ್ ಅನ್ನು ಕೂಡ ಆರೋಪಿಯಿಂದ ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿ ಮಲ್ಕಪ್ಪ ಹೆಳವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ABOUT THE AUTHOR

...view details