ಕರ್ನಾಟಕ

karnataka

ETV Bharat / crime

ಮನೆಗಳ್ಳರನ್ನು ಖೆಡ್ಡಾಕ್ಕೆ ಕೆಡವಿದ ಕೆಂಗೇರಿ ಪೊಲೀಸರು: ಚಿನ್ನ-ಬೆಳ್ಳಿ, ನಗದು ವಶ

ಚಾಂದ್ ಪಾಷ ಮತ್ತು ಮೊಹಮ್ಮದ್ ಅರೀಫ್ ಬಂಧಿತ ಆರೋಪಿಗಳಾಗಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಖದೀಮರು, ಮನೆಯ ಹಿಂಬಾಗಿಲನ್ನ ರಾಡ್​​​ನಿಂದ ಮೀಟಿ ಚಿನ್ನ-ಬೆಳ್ಳಿ, ನಗದು ಕದ್ದು ಎಸ್ಕೇಪ್ ಆಗಿದ್ದರು.

arrest-of-two-serial-hom-thefts-
ಇಬ್ಬರು ಸರಣಿ ಮನೆಗಳ್ಳರನ್ನು ಖೆಡ್ಡಾಕ್ಕೆ ಕೆಡವಿದ ಕೆಂಗೇರಿ ಪೊಲೀಸರು

By

Published : Feb 19, 2021, 4:37 PM IST

ಬೆಂಗಳೂರು:ಸರಣಿ ಮನೆಗಳ್ಳತನದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಓದಿ: ಐದು ದಶಕ ಪೂರೈಸಿದ ತುಳು ಚಿತ್ರರಂಗ: ಕೋಸ್ಟಲ್​ವುಡ್​ನಲ್ಲಿ ಸಂಭ್ರಮ

ಚಾಂದ್ ಪಾಷ ಮತ್ತು ಮೊಹಮ್ಮದ್ ಅರೀಫ್ ಬಂಧಿತ ಆರೋಪಿಗಳಾಗಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಖದೀಮರು, ಮನೆಯ ಹಿಂಬಾಗಿಲನ್ನ ರಾಡ್​​​ನಿಂದ ಮೀಟಿ ಚಿನ್ನ-ಬೆಳ್ಳಿ, ನಗದು ಕದ್ದು ಎಸ್ಕೇಪ್ ಆಗಿದ್ದರು.

ಕಳುವಾದ ಮನೆ ಮಾಲೀಕರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ ಖಾಕಿ ಪಡೆ. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮತ್ತಷ್ಟು ಪ್ರಕರಣ ಬೆಳಕಿಗೆ ಬಂದಿವೆ. 11,21,000 ರೂ. ಬೆಲೆ ಬಾಳುವ 249 ಗ್ರಾಂ ಚಿನ್ನ ಹಾಗೂ 286 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details