ಕರ್ನಾಟಕ

karnataka

ETV Bharat / crime

ಬೆಂಗಳೂರು: ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಬಂಧನ - ಈಟಿವಿ ಭಾರತ ಕರ್ನಾಟಕ

ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ರೌಡಿಯನ್ನು ಗೂಂಡಾ ಕಾಯ್ದೆಯಡಿ ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

Rowdysheeter Hanumantaraju
ರೌಡಿಶೀಟರ್ ಹನುಮಂತರಾಜು

By

Published : Dec 13, 2022, 5:08 PM IST

ಬೆಂಗಳೂರು:ನಿರಂತರವಾಗಿ ಸಮಾಜವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟು ಮಾಡುತ್ತಿದ್ದ ರೌಡಿಯನ್ನು ಗೂಂಡಾ ಕಾಯ್ದೆಯಡಿ ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಹನುಮಂತರಾಜು 2012ರಿಂದ 2022ರವರೆಗೆ ಸುಲಿಗೆ, ದರೋಡೆ, ಕೊಲೆ ಯತ್ನ, ಕಳ್ಳತನ ಸೇರಿದಂತೆ ಸುಮಾರು 17 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಹಲವು ಬಾರಿ ಜೈಲಿಗೂ ಹೋಗಿ ಜಾಮೀನಿನ‌‌ ಪಡೆದು ಹೊರಬಂದಿದ್ದ.

ಜಾಮೀನು ಷರತ್ತು ಉಲ್ಲಂಘಿಸಿ‌ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡು ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ‌. ಈತನ ವಿರುದ್ಧ ರಾಜಗೋಪಾಲನಗರ, ಪೀಣ್ಯ, ಸೋಲದೇವನ ಹಳ್ಳಿ, ಬ್ಯಾಡರಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈತನನ್ನು ಗೂಂಡಾ ಆ್ಯಕ್ಟ್ ಅಡಿ ಬಂಧಿಸಲಾಗಿದೆ‌ ಎಂದು‌ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ:ಮಧ್ಯರಾತ್ರಿ ಠಾಣೆಯಲ್ಲೇ ಎಣ್ಣೆ ಪಾರ್ಟಿ: ಎಸ್​ಐ ಮೇಲೆ ಹೆಡ್ ಕಾನ್‌ಸ್ಟೇಬಲ್ ಹಲ್ಲೆ

ABOUT THE AUTHOR

...view details