ಕರ್ನಾಟಕ

karnataka

ETV Bharat / crime

ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ - TMC

ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಇಂದು ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಮೃತದೇಹ ಪತ್ತೆಯಾಗಿದೆ.

Another BJP worker found dead in West Midnapore
ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ

By

Published : Mar 27, 2021, 11:47 AM IST

ಪಶ್ಚಿಮ ಮೇದಿನಿಪುರ: ಪಶ್ಚಿಮ ಬಂಗಾಳದಲ್ಲಿಂದು ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಇತ್ತ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆಯಾಗಿದ್ದಾರೆ.

ಮಂಗಲ್ ಸೊರೆನ್ (30) ಮೃತ ಬಿಜೆಪಿ ಕಾರ್ಯಕರ್ತ. ಪಶ್ಚಿಮ ಮೇದಿನಿಪುರದ ಕೇಶಿಯಾರಿಯ ಬೇಗಂಪೂರ್​​ನಲ್ಲಿರುವ ಅವರ ಮನೆಯ ಹೊರಗೆ ಮಂಗಲ್ ಸೊರೆನ್​ರ ಮೃತದೇಹ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಓದಿಗೆ: ಬಂಗಾಳ ಚುನಾವಣೆ ಮುನ್ನಾ ದಿನ ಬಿಜೆಪಿ ಕಾರ್ಯಕರ್ತನ ಶವ ಪತ್ತೆ: ಟಿಎಂಸಿ ವಿರುದ್ಧ ಆರೋಪ

ಸೊರೆನ್ ಸಾವಿನ ಹಿಂದೆ 'ಟಿಎಂಸಿ ಗೂಂಡಾಗಳ' ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಮತದಾನದ ಸಮಯದಲ್ಲಿ ಉದ್ವಿಗ್ನತೆ ಉಂಟುಮಾಡಲು ತೃಣಮೂಲ ಕಾಂಗ್ರೆಸ್​ ಯತ್ನಿಸುತ್ತಿದ್ದು, ನಮ್ಮ ಕಾರ್ಯಕರ್ತನನ್ನು ಕೊಂದಿದ್ದಾರೆ ಎಂದು ಬಿಜೆಪಿ ಮುಖಂಡ ಬಬ್ಲು ಬರಾಮ್ ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಪಶ್ಚಿಮ ಮೇದಿನಿಪುರದ ಸಾಲ್ಬೊನಿಯಲ್ಲಿ ಬಿಜೆಪಿ ಕಾರ್ಯಕರ್ತ ಲಾಲ್ಮೋಹನ್ ಸೊರೆನ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ABOUT THE AUTHOR

...view details