ಕರ್ನಾಟಕ

karnataka

ETV Bharat / crime

ಕಡಿಮೆ ವೆಚ್ಚದಲ್ಲಿ ಉನ್ನತ ದರ್ಜೆ ಫ್ಲಾಟ್​ ನೀಡೋದಾಗಿ 900 ಕೋಟಿ ರೂ ವಂಚನೆ ಆರೋಪ; ಟಿಟಿಡಿ ಸದಸ್ಯ ಅಂದರ್​ - 900 ಕೋಟಿ ರೂ ವಂಚನೆ

ಲಕ್ಷ್ಮೀ ನಾರಾಯಣ ಮೇಲೆ ವಂಚನೆ ಆರೋಪ ಪ್ರಕರಣ ದಾಖಲಾದ ಹಿನ್ನೆಲೆ ನೈತಿಕ ಹೊಣೆ ಹೊತ್ತು ಶುಕ್ರವಾರ ಟಿಟಿಡಿಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

900-crores-fraud-by-giving-high-class-flat-at-low-cost-arrest-of-ttd-board-member
ಕಡಿಮೆ ವೆಚ್ಚದಲ್ಲಿ ಉನ್ನತ ದರ್ಜೆ ಫ್ಲಾಟ್​ ನೀಡುವುದಾಗಿ 900 ಕೋಟಿ ರೂ ವಂಚನೆ; ಟಿಟಿಡಿ ಮಂಡಳಿ ಸದಸ್ಯನ ಬಂಧನ

By

Published : Dec 3, 2022, 12:22 PM IST

ಹೈದ್ರಾಬಾದ್​: ಟಿಟಿಡಿ ಮಂಡಳಿ ಸದಸ್ಯ ಹಾಗೂ ಸಾಹಿತ್ಯ ಇನ್ಫ್ರಾಟೆಕ್​ ವೆಂಚರ್​ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ ಎಂಬಿ ಭೂದರಿ ಲಕ್ಷ್ಮಿನಾರಾಯಣ ಅವರನ್ನು ಹೈದ್ರಾಬಾದ್​ ಸಿಸಿಎಸ್​ ಪೊಲೀಸರು ಬಂಧಿಸಿದ್ದಾರೆ. ಉದ್ಘಾಟನೆಯಾಗದ ಯೋಜನೆ ಸಂಬಂಧ ಅವರು 2,500 ಜನರಿಂದ 900 ಕೋಟಿ ಹಣವನ್ನು ಅವರು ಸಂಗ್ರಹಿಸಿ, ಮೋಸ ಮಾಡಿರುವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹಣಕಾಸಿನ ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

2019ರಲ್ಲಿ ಸಂಗರೆಡ್ಡಿ ಜಿಲ್ಲೆಯ ಅಮಿನ್​ಪುರ್​ ಗ್ರಾಮದಲ್ಲಿ ಸಾಹಿತ್ಯ ಸರವನಿ ಎಲೈಟ್​ ಪ್ರಾಜೆಕ್ಟ್​​ ಅನ್ನು ಲಕ್ಷ್ಮಿ ನಾರಾಯಣ ಘೋಷಿಸಿದ್ದರು. 23 ಎಕರೆ ಪ್ರದೇಶದಲ್ಲಿ 38 ಅಂತಸ್ತಿನ ಎರಡು- ಮೂರು ಬೆಡ್​ರೂಂ ಅಪಾರ್ಟ್​ಮೆಂಟ್ ಕಟ್ಟುವುದಾಗಿ ಹೇಳಿದ್ದರು. ಇದಕ್ಕಾಗಿ ಕಡಿಮೆ ವೆಚ್ಚದಲ್ಲಿ ಉನ್ನತ ದರ್ಜೆ ಫ್ಲಾಟ್​ಗಳನ್ನು ನೀಡುವುದಾಗಿ 1,700 ಜನರಿಂದ 539 ಕೋಟಿಯನ್ನು ಸಂಗ್ರಹಿಸಿದ್ದರು ಎನ್ನಲಾಗ್ತಿದೆ.

ಆದರೆ, ಈ ಯೋಜನೆ ನಿರ್ಮಾಣಕ್ಕೆ ಎಚ್​ಎಂಡಿಎ ಅವರಿಂದ ಅನುಮತಿ ಪಡೆದಿರಲಿಲ್ಲ. ಆರಂಭದಲ್ಲಿ ಭೂಮಿಯನ್ನು ಪ್ರಾಜೆಕ್ಟ್​ಗಾಗಿ ಭೂಮಿ ವಶಕ್ಕೆ ಪಡೆದು, ಅನುಮತಿ ಪಡೆದ ಬಳಿಕ ನಿರ್ಮಾಣಕ್ಕೆ ಸಮಯ ಬೇಕಾಗುತ್ತದೆ ಎಂದಿದ್ದರು. ಮೂರು ವರ್ಷ ಆದರೂ ಈ ಪ್ರಾಜೆಕ್ಟ್​ ಪೂರ್ಣಗೊಳ್ಳದ ಹಿನ್ನೆಲೆ ಜನರು ತಮ್ಮ ಬುಕ್ಕಿಂಗ್​ ರದ್ದು ಮಾಡಿ, ಹಣ ವಾಪಸ್​ ನೀಡುವಂತೆ ಕೇಳಿದ್ದಾರೆ. ಈ ವೇಳೆ ಲಕ್ಷ್ಮಿನಾರಾಯಣ 15-18ರಷ್ಟು ಬಡ್ಡಿಗೆ ಹಣ ನೀಡುವುದಾಗಿ ಹಣ ಪಡೆದಿದ್ದಾರೆ. ಬಳಿಕ ಜನರಿಗೆ ನೀಡಿದ ಕೆಲವು ಚೆಕ್​ಗಳು ಬೌನ್ಸ್​ ಆಗಿದ್ದು, ಸಂತ್ರಸ್ತರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಹಲವು ಪ್ರಾಜೆಕ್ಟ್​ ಹೆಸರಲ್ಲಿ ಮೋಸ: ಈ ಅಪಾರ್ಟ್​ಮೆಂಟ್​ ಹೊರತಾಗಿ ಪ್ರಗತಿನಗರ್​, ಬೆಂಗಳೂರು, ಕಾಕತೀಯ ಹಿಲ್ಸ್​​, ಅಯ್ಯಪ್ಪ ಸೊಸಥಟಿ, ಕೊಮಪಲ್ಲಿ, ಸಮೀರ್​ ಪೇಟ್​ ಸೇರಿದಂತೆ ಹೈದರಾಬಾದ್​ ಹೊರ ಪ್ರದೇಶದಲ್ಲಿ ಹಲವು ಒ್ರಾಜೆಕ್ಟ್​ ಆರಂಭಿಸುವುದಾಗಿ ಆರೋಪಿ ತಿಳಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ 2,500 ಜನರಿಂದ 900 ಕೋಟಿ ಹಣವನ್ನು ಸಂಗ್ರಹಿಸಿದ್ದಾರೆ. ಅಮಿನ್​ಪುರ ಪ್ರಾಜೆಕ್ಟ್​ ಅನ್ನು 2021ರಲ್ಲಿ ಮುಗಿಸಿ ಕೊಡುವುದಾಗಿ ಹೇಳಿ ವಂಚಿಸಿದ ಆರೋಪ ಹಿನ್ನೆಲೆ ನೂರಾರು ಸಂತ್ರಸ್ತರು ಧರಣಿ ಮಾಡಿ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಈ ಪ್ರಕರಣ ಸಂಬಂಧ ಸಿಸಿಎಸ್​ ಪೊಲೀಸರು ಲಕ್ಷ್ಮಿನಾರಾಯಣ ಅವರನ್ನು ಕಳೆದ ಆಗಸ್ಟ್​ನಲ್ಲಿ ವಿಚಾರಣೆ ಕೂಡ ಮಾಡಿದ್ದರು ಎಂದು ತಿಳಿದುಬಂದಿದೆ.

ಟಿಟಿಡಿ ಮಂಡಳಿಗೆ ರಾಜೀನಾಮೆ:ಲಕ್ಷ್ಮೀನಾರಾಯಣ ಮೇಲೆ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆ ನೈತಿಕ ಹೊಣೆ ಹೊತ್ತು ಶುಕ್ರವಾರ ಟಿಟಿಡಿಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 2021ರಿಂದ ಟಿಟಿಡಿ ಸದಸ್ಯರಾಗಿದ್ದ ಅವರು ರಾಜೀನಾಮೆಯನ್ನು ರಾಜ್ಯ ಸರ್ಕಾರ ಮತ್ತು ಟಿಟಿಡಿಗೆ ರವಾನಿಸಿದ್ದಾರೆ.

ಇದನ್ನೂ ಓದಿ: ತಂದೆಯಿಂದ 50 ಲಕ್ಷ ಹಣ ವಸೂಲಿ ಮಾಡಲು ಅಪಹರಣದ ಕಥೆ ಕಟ್ಟಿದ ಮಗ!

ABOUT THE AUTHOR

...view details