ರಾಮನಗರ: 'ಲವ್ ಯೂ ರಚ್ಚು' ಸಿನಿಮಾ ದುರಂತ ಪ್ರಕರಣ ಸಂಬಂಧ ರಾಮನಗರದ ಅಪಾರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಟ ಅಜಯ್ ರಾವ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ. ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿದೆ.
ಪ್ರಕರಣದ FIRನಲ್ಲಿ ಹೆಸರಿಲ್ಲದಿದ್ದರೂ ನಿರೀಕ್ಷಣಾ ಜಾಮೀನು ಕೋರಿ ನಟ ಅಜಯ್ ರಾವ್ ಅರ್ಜಿ ಸಲ್ಲಿಸಿದ್ದರು. ಜೋಗರಪಾಳ್ಯ ಗ್ರಾಮದಲ್ಲಿ ಚಿತ್ರೀಕರಣದ ವೇಳೆ ಸಾಹಸ ಕಲಾವಿದ ವಿವೇಕ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
'ಲವ್ ಯೂ ರಚ್ಚು' ದುರಂತ ಕೇಸ್: ನಟ ಅಜಯ್ ರಾವ್‌ಗೆ ನಿರೀಕ್ಷಣಾ ಜಾಮೀನು ಅರ್ಜಿಯ ಅಂತಿಮ ತೀರ್ಪು ಇಂದು - ನಟ ಅಜಯ್ ರಾವ್
'ಲವ್ ಯೂ ರಚ್ಚು' ಸಿನಿಮಾ ದುರಂತ ಪ್ರಕರಣ ಸಂಬಂಧ ನಟ ಅಜಯ್ ರಾವ್ ಅವರ ಜಾಮೀನು ಅರ್ಜಿ ವಿಚಾರಣೆಯ ಅಂತಿಮ ತೀರ್ಪುಅನ್ನು ರಾಮನಗರದ ಅಪಾರ ಜಿಲ್ಲಾ ಸತ್ರ ನ್ಯಾಯಾಲಯ ನೀಡಲಿದೆ.
'ಲವ್ ಯೂ ರಚ್ಚು' ದುರಂತ ಕೇಸ್; ಇಂದು ನಟ ಅಜಯ್ ರಾವ್‌ಗೆ ನಿರೀಕ್ಷಣಾ ಜಾಮೀನು ಅರ್ಜಿಯ ಅಂತಿಮ ತೀರ್ಪು
ವಿಚಾರಣೆಗೆ ಆಗಮಿಸುವಂತೆ ಬಿಡದಿ ಪೊಲೀಸರು ಸೂಚಿಸಿದ್ದರು. ವಿಚಾರಣೆ ನೆಪದಲ್ಲಿ ಬಂಧನದ ಭಯದಿಂದ ಠಾಣೆಗೆ ಬಾರದ ಅಜಯ್ ರಾವ್, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.