ಪಂಜಾಬ್ : ಅಮೃತಸರದಲ್ಲಿ ಸ್ವರ್ಣಮಂದಿರವನ್ನು ಅಪವಿತ್ರಗೊಳಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ನಿನ್ನೆಯಷ್ಟೇ ಸ್ಥಳೀಯರು ಹೊಡೆದು ಕೊಂದ 24 ಗಂಟೆಗಳಲ್ಲಿ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ಪಂಜಾಬ್‌ನ ಕಪುರ್ತಲದ ನಿಜಾಂಪುರ್‌ನಲ್ಲಿ ಸಿಖ್ ಧ್ವಜಕ್ಕೆ ಅವಮಾನ ಮಾಡಿದ್ದಾನೆ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ ಕೊಲ್ಲಲಾಗಿದೆ.
ಮೃತ ವ್ಯಕ್ತಿ ಸಿಖ್ ಧ್ವಜ ನಿಶಾನ್ ಸಾಹಿಬ್‌ಗೆ ಅಗೌರವ ತೋರಿದ ಬಳಿಕ ಓಡಿ ಹೋಗಲು ಯತ್ನಿಸಿದ್ದಾನೆ. ಆಗ ಆತನ ಮೇಲೆ ದಾಳಿ ಮಾಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಮೃತಪಟ್ಟಿರುವ ವ್ಯಕ್ತಿಯನ್ನು ಸ್ಥಳೀಯರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.