ತಿರುವನಂತಪುರಂ (ಕೇರಳ):ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ಕೇರಳ ನಟಿ ರೇವತಿ ಸಂಪತ್, ತನಗೆ ಲೈಂಗಿಕ ಕಿರುಕುಳ ನೀಡಿದ ಖ್ಯಾತ ವ್ಯಕ್ತಿಗಳ ಹೆಸರು ಬಹಿರಂಗಪಡಿಸಿದ್ದಾರೆ.
ತನಗೆ ಲೈಂಗಿಕ ಕಿರುಕುಳ ನೀಡಿದ ಖ್ಯಾತ ವ್ಯಕ್ತಿಗಳ ಹೆಸರು ಬಹಿರಂಗಪಡಿಸಿದ ನಟಿ - Malayalam actress Revathy Sampath
ಮಲಯಾಳಂ ನಟಿ ರೇವತಿ ಸಂಪತ್ ಅವರು ತನಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ನಟ ಸಿದ್ದೀಕ್, ನಿರ್ದೇಶಕ ರಾಜೇಶ್ ಸೇರಿದಂತೆ 12 ಮಂದಿ ಖ್ಯಾತ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.
ನಟಿ ತನ್ನ ಸುದೀರ್ಘ ಫೇಸ್‌ಬುಕ್ ಪೋಸ್ಟ್‌ನಲ್ಲಿ ನಟ ಸಿದ್ದೀಕ್, ನಿರ್ದೇಶಕ ರಾಜೇಶ್ ತೌಚ್‌ರೈವರ್, ಡಿವೈಎಫ್‌ಐ ನಾಯಕ ನಂದು ಅಶೋಕನ್ ಸೇರಿದಂತೆ ವೈದ್ಯ, ಸಬ್ ಇನ್ಸ್ಪೆಕ್ಟರ್ರನ್ನೊಳಗೊಂಡ 14 ಮಂದಿ ಪ್ರಸಿದ್ಧ ವ್ಯಕ್ತಿಗಳ ಹೆಸರಿನ ಪಟ್ಟಿ ಬಿಡುಗಡೆ ಮಾಡಿ ಶಾಕ್ ನೀಡಿದ್ದಾರೆ. ಇವರೆಲ್ಲರೂ ಲೈಂಗಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾತಿನಿಂದ ನನಗೆ ಕಿರುಕುಳ ನೀಡಿದ ಅಪರಾಧಿಗಳಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ರೇವತಿ ಸಂಪತ್ ಅವರ ಪೋಸ್ಟ್ ವೈರಲ್ ಆಗುತ್ತಿದೆ ಮತ್ತು ಇದು ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನವೇ ಎಂದು ಹಲವರು ನಟಿಯನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಕೆಲ ಅಭಿಮಾನಿಗಳು, ನೆಟ್ಟಿಗರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.