ನವದೆಹಲಿ: ಅಲ್ಕೋಹಾಲ್ ವಿತರಣಾ ಪ್ಲಾಟ್ಫಾರ್ಮ್ನಿಂದ ತಾವು ಮೋಸ ಹೋಗಿರುವುದಾಗಿ ಹಿರಿಯ ನಟಿ ಶಬಾನಾ ಅಜ್ಮಿ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಸಹ ಮಾಡಿದ್ದಾರೆ.
ಅಲ್ಕೋಹಾಲ್ ಡೆಲಿವರಿ ಪ್ಲಾಟ್ಫಾರ್ಮ್ನಿಂದ ಮೋಸ್ ಹೋಗಿದ್ದು, ಲಿವಿಂಗ್ ಲಿಕ್ವಿಡ್ಸ್ ಅಲ್ಕೋಹಾಲ್ ಡೆಲಿವರಿ ಪ್ಲಾಟ್ಫಾರ್ಮ್ ತಮಗೆ ಮೋಸ ಮಾಡಿದೆ ಎಂದು 70 ವರ್ಷದ ನಟಿ ಮಾಹಿತಿ ನೀಡಿದ್ದಾರೆ. ಅಲ್ಕೋಹಾಲ್ಗೋಸ್ಕರ ನಾನು ಮುಂಗಡವಾಗಿ ಹಣ ಪಾವತಿ ಮಾಡಿದ್ದೇನೆ. ಆದರೆ ನಾನು ಆರ್ಡರ್ ಮಾಡಿರುವ ವಸ್ತು ಬಾರದ ಕಾರಣ ಅವರಿಗೆ ಕರೆ ಮಾಡಿದ್ದೇನೆ. ಆದರೆ ಅವರು ನನ್ನ ಕರೆ ಸ್ವೀಕರಿಸುತ್ತಿಲ್ಲ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.