ಕರ್ನಾಟಕ

karnataka

ETV Bharat / crime

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ, ಸ್ಥಳೀಯರಿಂದ ಧರ್ಮದೇಟು.. - accused Sexually explicit to girl in hasana

ಹೊಸ ಬಸ್ ನಿಲ್ದಾಣದಿಂದ ಅಣತಿ ದೂರದಲ್ಲಿ 3 ಶಾಲಾ ಕಾಲೇಜುಗಳಿದ್ದು, ಕರಿಗೌಡ ಬಡಾವಣೆಯಲ್ಲಿ ಹೆಚ್ಚಾಗಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು ಮತ್ತು ಕೆಲಸಕ್ಕೆ ಹೋಗುವ ಮಹಿಳೆಯರು ವಾಸವಿದ್ದಾರೆ. ಈ ಹಿಂದೆ ಇದೇ ಬಡಾವಣೆಯ ಸಮೀಪದಲ್ಲಿ 3 ಕೊಲೆ ಪ್ರಕರಣ ನಡೆದಿವೆ..

sexually-explicit-to-girl
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ

By

Published : Apr 20, 2021, 4:05 PM IST

ಹಾಸನ :ಬಾಲಕಿಗೆ ಚುಡಾಯಿಸಿದ ಹಿನ್ನೆಲೆ ಕಾಮುಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಹಾಸನ ನಗರದ ಕರಿಗೌಡ ಬಡಾವಣೆಯಲ್ಲಿ ನಡೆದಿದೆ.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ..

ಓದಿ: ಮೇಯಲು ಹೋದ ಹಸುಗಳನ್ನು ಗುಂಡಿಕ್ಕಿ ಕೊಂದು ಕತ್ತು ಕುಯ್ದ ದುಷ್ಕರ್ಮಿಗಳು

ಇಂದು ಬೆಳಗ್ಗೆ ಎಂದಿನಂತೆ ಬಾಲಕಿ ಶಾಲೆಗೆ ಹೋಗಲು ಹೊಸ ಬಸ್ ನಿಲ್ದಾಣದ ಮೂಲಕ ಸೈಕಲ್‌ನಲ್ಲಿ ಹಾಸನದ ಕರೀಗೌಡ ಬಡಾವಣೆಯ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾಮುಕ ಆಕೆಯನ್ನು ಎಳೆದಾಡಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾನೆ. ನಂತರ ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟಿದ್ದಾರೆ.

ಘಟನೆ ಹಿನ್ನೆಲೆ :ಇಂದು ಬೆಳಗ್ಗೆ 9 ಗಂಟೆಯ ಸಮಯದಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನಡೆಸಿದ್ದಾನೆ. ಆತನನ್ನು ಆಲೂರು ತಾಲೂಕಿನ ಧರ್ಮಪುರಿ ಹೊಸೂರು ಗ್ರಾಮದ ಕುಮಾರ್ ಅಲಿಯಾಸ್ ಮೇಟ್ಲು ಕುಮಾರ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಆರೋಪಿಗೆ ಸಖತ್ ಗೂಸಾ ನೀಡಿದ್ದು, ಕೊನೆಗೆ ಬಡಾವಣೆ ಠಾಣೆ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಹೊಸ ಬಸ್ ನಿಲ್ದಾಣದಿಂದ ಅಣತಿ ದೂರದಲ್ಲಿ 3 ಶಾಲಾ ಕಾಲೇಜುಗಳಿದ್ದು, ಕರಿಗೌಡ ಬಡಾವಣೆಯಲ್ಲಿ ಹೆಚ್ಚಾಗಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು ಮತ್ತು ಕೆಲಸಕ್ಕೆ ಹೋಗುವ ಮಹಿಳೆಯರು ವಾಸವಿದ್ದಾರೆ. ಈ ಹಿಂದೆ ಇದೇ ಬಡಾವಣೆಯ ಸಮೀಪದಲ್ಲಿ 3 ಕೊಲೆ ಪ್ರಕರಣ ನಡೆದಿವೆ.

ಇತ್ತೀಚಿಗೆ ತಂದೆ-ತಾಯಿ ಜೊತೆ ಹೊಸ ಬಸ್ ನಿಲ್ದಾಣದಲ್ಲಿ ಮಲಗಿದ್ದ ಸಂದರ್ಭದಲ್ಲಿ ಪುಟ್ಟ ಬಾಲಕಿಯೊಬ್ಬಳನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಪ್ರಕರಣ ಮಾಸುವ ಮುನ್ನವೇ ಈ ಪ್ರಕರಣ ಕೂಡ ನಡೆದಿರುವುದು ಶೋಚನೀಯ.

ಇಲ್ಲಿ ಸುರಕ್ಷತೆ ಇಲ್ಲದ ಕಾರಣ ಈ ರೀತಿಯ ಪುಂಡ-ಪೋಕರಿಗಳು ಮತ್ತು ಕಾಮುಕರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಇನ್ನಾದರೂ ಪೊಲೀಸ್ ಇಲಾಖೆ ಈ ಬಡಾವಣೆ ಹಾಗೂ ಬಸ್ಟ್ಯಾಂಡ್ ಸಮೀಪ ಮತ್ತಷ್ಟು ಗಸ್ತು ಹಾಕಿದರೆ ಪ್ರಕರಣ ತಗ್ಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ABOUT THE AUTHOR

...view details