ಕರ್ನಾಟಕ

karnataka

ETV Bharat / crime

ರೈಲ್ವೆ ಹಳಿ ದುರಸ್ತಿ ವೇಳೆ ಅವಘಡ: ಓರ್ವ ಸಾವು, 8 ಕಾರ್ಮಿಕರಿಗೆ ಗಾಯ - Yamuna Khadar, Delhi

ದೆಹಲಿಯ ಯಮುನಾ ಖಾದರ್ ಪ್ರದೇಶದಲ್ಲಿನ ರೈಲ್ವೆ ಹಳಿಯ ದುರಸ್ತಿ ವೇಳೆ ಕಬ್ಬಿಣದ ಕಂಬ ಬಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.

Accident during railway track repair
ರೈಲ್ವೆ ಹಳಿ ದುರಸ್ತಿ ವೇಳೆ ಅವಘಡ

By

Published : Mar 11, 2021, 10:31 AM IST

ನವದೆಹಲಿ:ರೈಲ್ವೆ ಹಳಿ ದುರಸ್ತಿ ವೇಳೆ ಕಬ್ಬಿಣದ ಕಂಬ ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಪೂರ್ವ ದೆಹಲಿಯ ಯಮುನಾ ಖಾದರ್ ಪ್ರದೇಶದಲ್ಲಿನ ರೈಲ್ವೆ ಹಳಿಯಲ್ಲಿ ನಿನ್ನೆ ರಾತ್ರಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಎರಡು ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಥಾಣೆಯಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ

ಮೃತ ಕಾರ್ಮಿಕನನ್ನು ರಾಜಸ್ಥಾನದ ಅಲ್ವಾರ್ ಮೂಲದ ಶಹಜಾದ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details