ಕರ್ನಾಟಕ

karnataka

ETV Bharat / crime

ಲಾರಿ-ವ್ಯಾಗನಾರ್ ಕಾರು ನಡುವೆ ಅಪಘಾತ, ನವ ವಿವಾಹಿತೆ ಸಾವು - Accident between a lorry-wagoner car

ಮೃತ ಮಹಿಳೆಗೆ 40 ದಿನಗಳ ಹಿಂದೆಯಷ್ಟೇ ಗೋಪಿಕ್ ಎಂಬುವರ ಜೊತೆ ವಿವಾಹವಾಗಿತ್ತು. ನವ ದಂಪತಿ ಬೆಂಗಳೂರಿನ ತಮ್ಮ ಸಂಬಂಧಿಕರ ಮನೆಗೆ ಬರುವಾಗ ಈ ಅಪಘಾತ ಸಂಭವಿಸಿದೆ..

-lorry-wagoner-car-in-nelamangala
ಲಾರಿ-ವ್ಯಾಗನರ್ ಕಾರು ನಡುವೆ ಅಪಘಾತ

By

Published : Apr 3, 2021, 10:02 PM IST

ನೆಲಮಂಗಲ :ಕೋಳಿ ಸಾಗಾಟದ ಲಾರಿ ಮತ್ತು ವ್ಯಾಗನಾರ್ ಕಾರು ನಡುವೆ ಅಪಘಾತ ಸಂಬಂಧಿಸಿದೆ. ಘಟನೆಯಲ್ಲಿ 40 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಸಾವನ್ನಪ್ಪಿದ್ದಾರೆ.

ಲಾರಿ-ವ್ಯಾಗನಾರ್ ಕಾರು ನಡುವೆ ಅಪಘಾತ..

ಓದಿ: ರಾಜ್ಯದಲ್ಲಿ 10 ಲಕ್ಷ ದಾಟಿದ ಸೋಂಕಿತರ ಸಂಖ್ಯೆ: ಇಂದು 4,373 ಜನರಿಗೆ ಕೊರೊನಾ

ಕುಣಿಗಲ್ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯ ಮರೂರು ಹ್ಯಾಂಡ್ ಪೋಸ್ಟ್ ಬಳಿ ಅಪಘಾತ ನಡೆದಿದೆ. ಘಟನೆಯಲ್ಲಿ ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ನವವಿವಾಹಿತೆ ಧನುಷಾ (23) ಸಾವನ್ನಪ್ಪಿದ್ದಾರೆ.

ಮೃತ ಮಹಿಳೆಗೆ 40 ದಿನಗಳ ಹಿಂದೆಯಷ್ಟೇ ಗೋಪಿಕ್ ಎಂಬುವರ ಜೊತೆ ವಿವಾಹವಾಗಿತ್ತು. ನವ ದಂಪತಿ ಬೆಂಗಳೂರಿನ ತಮ್ಮ ಸಂಬಂಧಿಕರ ಮನೆಗೆ ಬರುವಾಗ ಈ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಧನುಷಾ ಪತಿ ಗೋಪಿಕ್, ರೂಪ ವೇಣುಗೋಪಾಲ್ ಹಾಗೂ ಶುಭ ಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details